ಬ್ರೇಕಿಂಗ್ ನ್ಯೂಸ್ ಸಮಾಜಿಕ ಜಾಲತಾಣದಲ್ಲಿ ಕೊರೊನಾ ಸುಳ್ಳು ಪೊಸ್ಟ ..ಆರೋಪಿ ವಿರುದ್ಧ ಕೇಸ್…! 26/03/202026/03/2020 admin ಅಥಣಿ : ಕೊರೊನಾ ಸೋಂಕಿನ ತಗಲಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ವದಂತಿ ಹರಡಿದ ವ್ಯಕ್ತಿಯ ವಿರುದ್ಧ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಐಗಳಿ ಪೊಲೀಸ್ರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ, ಅರೋಪಿ ಪರಾರಿಯಾಗಿದ್ದು, ಪತ್ತೇಗಾಗಿ ಪೊಲೀಸ್ ತಂಡ ರಚನೆ ಮಾಡಿದ್ದಾರೆ ಗೌಡೇಶ ಬಿರಾದಾರ ತುಂಗಳ ಎಂಬ ಹೆಸರಿನ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದ್ದು ಆತ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ನಲ್ಲಿ ” ಗೋವಾ ರಾಜ್ಯಕ್ಕೆ ಕೂಲಿ ಅರಸಿ ಹೋಗಿದ್ದ ಐಗಳಿ ಗ್ರಾಮದ 5 ಜನರು ಕೊರೋನಾ ಸೋಂಕಿಗೆ ತಗಲಿದೆ ಎಂಬ ಸುಳ್ಳು ಸುದ್ದಿ ಹರಿಬಿಟ್ಟಿದ್ದಾರೆ, ಇವತ್ತು ಗೋವಾದಿಂದ ಮರಳಿ ಬರುವಾಗ ಅಥಣಿಯಲ್ಲಿ ವಶಕ್ಕೆ ಪಡೆದುಕೊಂಡ ಸಿಬ್ಬಂದಿ ” ಎಂಬುವ ಮೆಸೇಜನ್ನು ಪೋಸ್ಟ್ ಮಾಡಿ ಕರೋನಾ ( ಕೊವಿಡ – 19 ) ಸೋಂಕಿನ ಬಗ್ಗೆ ಸಾರ್ವಜನಿಕರಲ್ಲಿ ಭಯ ಹುಟ್ಟಿಸಿ ಸುಳ್ಳು ವದಂತಿಯನ್ನು ಹರಡಿ ಸಾರ್ವಜನಿಕ ನೆಮ್ಮದಿ ಹಾಳು ಮಾಡಿದ ಅಪರಾಧದ ಮೇಲೆ ಕಲಂ 505 (1) ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದ ಬಗ್ಗೆ ಅಥಣಿ ಡಿವೈಎಸ್ಪಿ ಎಸ್, ವಿ, ಗಿರೀಶ್ ಮಾತನಾಡಿ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರಲ್ಲಿ ಭಯ ಭೀತಿ ಹುಟ್ಟಿಸಿ ಶಾಂತಿ ಕೆಡಿಸಿ ನೆಮ್ಮದಿ ಹಾಳುಮಾಡುವ ಇಂತಹಾ ಸುಳ್ಳು ವದಂತಿಗಳನ್ನು ಹಬ್ಬಿಸುವ ಕೀಡಿ ಗೇಡಿಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು Share