ಬ್ರೇಕಿಂಗ್ ನ್ಯೂಸ್ ಕೊರೊನಾ ಭೀತಿ : ಅಥಣಿ ಗಡಿಯಲ್ಲಿ ತೀವ್ರ ಕಟ್ಟೆಚ್ಚರ 26/03/202026/03/2020 admin ಅಥಣಿ:ಕೋರೋನ ಬಗ್ಗೆ ಮುಂಜಾಗ್ರತಾ ಕ್ರಮವಾಗಿ ತಾಲೂಕಿನ ಗಡಿ ಗ್ರಾಮಗಳಾದ ಕೊಟ್ಟಲಗಿ,ಬಾಳಿಗೇರಿ,ತೇಲಸಂಗ,ಕಾಗವಾಡ ಸೇರಿದಂತೆ ಹಲವಾರು ಚೆಕ್ ಪೊಸ್ಟಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಅಲ್ಲದೆ ಪ್ರತಿಯೊಂದು ಚೆಕ್ ಪೋಸ್ಟ್ ಗಳಲ್ಲಿ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆ ತಪಾಸಣೆಗೊಳಪಡಿಸಿ ಪ್ರಯಾಣಿಕರನ್ನು ಪರೀಕ್ಷಿಸುತ್ತಿದ್ದಾರೆ ಅಲ್ಲದೆ ಯಾವುದೇ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಹೋಗುವ ವಾಹನವಾಗಲಿ ಅಥವಾ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಪ್ರವೇಶಿಸುವ ಪ್ರವಾಸಿಗರ ವಾಹನಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಿ ಪ್ರವೇಶಕ್ಕೆ ಅವಕಾಶ ನೀಡುತ್ತಿಲ್ಲ. ಜನ ಅರಿವಿಲ್ಲದೆ ಇನ್ನೂ ದೂರದೂರದಿಂದ ಗುಡ್ಡಾಪುರ ಮುಂತಾದ ದೇವಸ್ಥಾನಗಳಿಗೆ ಹೋಗುವ ಪ್ರಯತ್ನಗಳನ್ನು ಮಾಡುತ್ತಿದ್ದು ಚೆಕ್ ಪೋಸ್ಟ್ದಲ್ಲಿರುವ ಸಿಬ್ಬಂದಿಗಳು ಸಂಪೂರ್ಣವಾಗಿ ಅವರಿಗೆ ಪ್ರವೇಶ ನಿರಾಕರಿಸಿ ಹಿಂತಿರುಗಿಸುತ್ತಿರುವುದು ಗಡಿಗ್ರಾಮ ಕೊಟ್ಟಲಗಿ ಚೆಕ್ ಪೋಸ್ಟ್ನಲ್ಲಿ ಕಂಡುಬಂತು. Share