ಬ್ರೇಕಿಂಗ್ ನ್ಯೂಸ್ ಅರಟಾಳ ಗ್ರಾಮದಲ್ಲಿ ಗ್ರಾಪಂ ವತಿಯಿಂದಾ ಕರೋನಾ ವೈರಸ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಕಾರ್ಯಕ್ರಮ 24/03/202024/03/2020 admin ಅರಟಾಳ ; ಸಾರ್ವಜನಿಕ ಸ್ಥಳಗಳಾದ ದೇವಸ್ಥಾನದ ಕಟ್ಟೆ, ಬಾವಿ, ಕೆರೆ, ಬಸ್ಸ ನಿಲ್ದಾಣಗಳಲ್ಲಿ ಗುಂಪು ಗುಂಪುಗಾಗಿ ಸೇರಿಕೊಳ್ಳಬಾರದು. ಪ್ರತಿಯೊಬ್ಬರ ನಡುವೆ ಕನಿಷ್ಠ ಆರು ಅಡಿ ಅಂತರ ಇರಬೇಕು, ಯಾರು ಹೊರಗಡೆ ತಿರುಗಾಡುವುದು ಮಾಡಬಾರದು ಎಂದು ಗ್ರಾಪಂ ಪಿಡಿಒ ಎ. ಜಿ. ಎಡಕೆ ಹೇಳಿದರು. ಮಂಗಳವಾರ ಅವರು ಗ್ರಾಮದಲ್ಲಿ ಗ್ರಾಮ ಪಂಚಾಯತಿ ವತಿಯಿಂದ ನಡೆದ ಕರೋನಾ ವೈರಸ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಕರೋನಾ ವೈರಸ್ ಹರಡುವಿಕೆ ನಿಯಂತ್ರಿಸಲು ಸರ್ಕಾರದ ಆದೇಶದ ಮೇರೆಗೆ ಸಂತೆ, ಸಭೆ, ಸಮಾರಂಭ, ಚಾಹಾ ಅಂಗಡಿ, ಪಾನಶಾಪ್ ಅಂಗಡಿಗಳನ್ನು ಬಂದ ಮಾಡಲಾಗಿದೆ. ಪ್ರತಿನಿತ್ಯ ಜೀವನಕ್ಕೆ ಬೇಕಾಗುವ ಹಣ್ಣು, ತರಕಾರಿ, ಹಾಲು, ಔಷಧ, ಪತ್ರಿಕೆ ಸಿಗುತ್ತವೆ. ವೈರಸ್ ಹಾವಳಿ ಕಡಿಮೆಯಾಗುವರೆಗೆ ಹೆಚ್ಚು ಕಾಲ ಮನೆಯಲ್ಲಿ ಕಳೆಯಿರಿ. ನಿಮ್ಮ ಗ್ರಾಮಕ್ಕೆ ಯಾರಾದರು ಹೊರಗಿನವರು ಬಂದರೆ ತಕ್ಷಣ ತಿಳಿಸಿ ಎಂದರು. ಆರೋಗ್ಯ ಇಲಾಖೆಯ ಎಎಮ್‌ಎನ್ ರೇಣುಕಾ ಗಾಣಿಗ ಮಾತನಾಡಿ, ಕರೋನಾ ವೈರಸ್ ಹಳ್ಳಿಗಳಿಗೂ ಹರಡದಂತೆ ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಗ್ರಾಮೀಣ ಕಾರ್ಯಪಡೆಯನ್ನು ಸರ್ಕಾರ ರಚನೆ ಮಾಡಿದೆ. ಕಾರ್ಯಪಡೆಯಲ್ಲಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಮ ಲೇಖಾಧಿಕಾರಿ, ಗ್ರಾಮದ ಬೀಟ್ ಪೋಲಿಸ್, ಆರೋಗ್ಯ ಸಿಬ್ಬಂದಿ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ನೊಂದಾಯಿತ ಸ್ಥಳಿಯ ವೈಧ್ಯರು ಸದಸ್ಯರಾಗಿದ್ದಾರೆ. ಪಿಡಿಓ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ. ಎಲ್ಲರು ಸಾರ್ವಜನಿಕರಿಗೆ ವೈರಸ್ ಕುರಿತು ಜಾಗೃತಿಮುಡಿಸಬೇಕು. ಹೊಸಬರು ಯಾರಾದರು ಗ್ರಾಮಕ್ಕೆ ಬಂದರೆ ಆಶಾ ಕಾರ್ಯಕರ್ತೆಯರು ಪಿಡಿಒ ಅವರಿಗೆ ತಿಳಿಸಬೇಕು ಎಂದರು. ಕಾರ್ಯದರ್ಶಿ ಜೀತೇಂದ್ರ ಗದಾಡೆ, ಬೀಟ್ ಪೋಲಿಸ್ ಆರ್. ಎಸ್. ಪಾಟೀಲ, ಗ್ರಾಪಂ ಸದಸ್ಯರಾದ ಮಾಳಪ್ಪ ಕಾಂಬಳೆ, ಕರವೇ ಅಧ್ಯಕ್ಷ ಶ್ರೀಶೈಲ ಪೂಜಾರಿ, ಎಮ್. ಪಿ. ಪಾಟೀಲ, ಆಶಾ ಕಾರ್ಯಕರ್ತೆಯರಾದ ಅಮೃತಾ ಡಂಗಿ, ದ್ರಾಕ್ಷಾಯಣಿ ಕಾಂಬಳೆ, ರೇಣುಕಾ ಇಳಗಾರ, ಮಹಾದೇವ ಮಾದರ ಇದ್ದರು. Share