ಬ್ರೇಕಿಂಗ್ ನ್ಯೂಸ್ ಚಿಕ್ಕೋಡಿ ಪಟ್ಟಣ ಸಂಪೂರ್ಣ ಸ್ತಬ್ಧ 24/03/202024/03/2020 admin ಕೊರೊನಾ ವೈರಸ್ ಭೀತಿ ಹಿನ್ನಲೆ ಇಡೀ ರಾಜ್ಯಾಧ್ಯಂತ ಲಾಕ್‌ಡೌನ್ ಆದೇಶ ಹಿನ್ನಲೆ ಚಿಕ್ಕೋಡಿ ಪಟ್ಟಣವೂ ಸಂಪೂರ್ಣವಾಗಿ ಬಂದ ಆಗಿದೆ. ಜನಜೀವನ ಸಂಚಾರ ಇಲ್ಲದಂದತಾಗಿದೆ . ಹೌದು ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಇಡೀ ರಾಜ್ಯದಲ್ಲಿ ಲಾಕ್‌ಡೌನ್ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಿದೆ. ಹೀಗಾಗಿ ಚಿಕ್ಕೋಡಿ ಪಟ್ಟಣವು ಮಂಗಳವಾರ ಸಂಪೂರ್ಣವಾಗಿ ಬಂದ್ ಆಗಿತ್ತು. ಹಿಂದೂಗಳ ಪವಿತ್ರ ಹಬ್ಬವಾದ ಯುಗಾದಿ ಇದ್ದರೂ ಮಾರುಕಟ್ಟೆ ಖಾಲಿ ಖಾಲಿಯಾಗಿವೆ. ಪಟ್ಟಣದ ಮಾರುಕಟ್ಟೆಯ ಪ್ರಮುಖ ಬೀದಿಗಳು ಶಾಂತವಾಗಿವೆ. ಪ್ರಮುಖ ರಸ್ತೆಗಳಲ್ಲಿ ಪೊಲೀಸರ ಬ್ಯಾರಿಕೇಡ್ ಹಾಕಿ ವಾಹನಗಳನ್ನು ತಡೆಯುತ್ತಿದ್ದಾರೆ. ಬೆಳಿಗ್ಗೆಯಿಂದಲೇ ತಾಲೂಕು ಆಡಳಿತದಿಂದ ಎಚ್ಚರಿಕೆ ನೀಡುತ್ತಿದ್ದಾರೆ. ತಹಶೀಲ್ದಾರ, ಸಿಪಿಐ ಹಾಗೂ ಪುರಸಭೆ ಮತ್ತು ವೈದ್ಯಾದಿಕಾರಿಗಳು ಅಧಿಕಾರಿ ಗಳು ಜನರಿಗೆ ಮನೆಯಿಂದ ಯಾರು ಹೊರಗಡೆ ಬರಬೇಡಿ ಇದು ಒಂದು ಬಯಾನಕರವಾದ ರೊಗ ಅದಕ್ಕಾಗಿ ಯಾರು ಹೊರಗಡೆ ಬರದಂತೆ ಮನವಿಯನ್ನು ಮಾಡುತ್ತಿದ್ದರು Share