ಪತ್ರಕರ್ತರಿಂದ ಜನರ ಕೈ ಮುಗಿದು ಗುಲಾಬಿ ಕೊಟ್ಟು ಮನವಿ

ಅಥಣಿ : ಪಟ್ಟಣದಲ್ಲಿ ಕೊರೊನಾ ವೈರಸ್ ಜಾಗೃತಿ ಅಂಗವಾಗಿ ಅಥಣಿ ಪಟ್ಟಣದ ಕಾರ್ಯನಿರತ ಪತ್ರಕರ್ತರು ಸಾರ್ವಜನಿಕರಿಗೆ ಗುಲಾಬಿ ಕೊಟ್ಟು ಕೈ ಮುಗಿದು ವಿನಂತಿಸುವ ಮೂಲಕ ಅರಿವು ಮೂಡಿಸಿದರು.
ಕೊರೊನಾ ವೃರಸ್ ನಿಂದ ಉಂಟಾಗಿರುವ ಭಾರತ ಲಾಕ್ ಡೌನ್ ಇಂದು ಒಂಭತ್ತನೆ ದಿನಕ್ಕೆ ಕಾಲಿಟ್ಟಿದ್ದು ರಾಜ್ಯ ಸರ್ಕಾರ ಪೋಲಿಸರು ಸಾರ್ವಜನಿಕರ ಮೇಲೆ ಲಾಠಿ ಬೀಸದಂತೆ ಆದೇಶಿಸಿದ ಬೆನ್ನಲ್ಲೆ ರಸ್ತೆಯಲ್ಲಿ ಅನವಶ್ಯಕವಾಗಿ ಬೈಕ್ ಚಲಾಯಿಸುತ್ತಿದ್ದ ಸಾರ್ವಜನಿಕರನ್ನು ತಡೆದು ಮನೆಯಿಂದ ಹೊರಬರದಂತೆ ಮನವಿ ಮಾಡಲಾಯಿತು.
ಈ ವೇಳೆ ಮಾತನಾಡಿದ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ದೀಪಕ ಶಿಂಧೇ
ಕೊರೊನಾ ಕಟ್ಟೆಚ್ಚರದ ನಡುವೆಯೂ ವಿನಾಕಾರಣ ರಸ್ತೆಗೆ ಇಳಿಯುತ್ತಿರುವ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಗುಂಪು ಕೂಡುತ್ತಿರುವ ಸಾರ್ವಜನಿಕರಿಗೆ ಗುಲಾಬಿ ನೀಡಿ ಕೈ ಮುಗಿದು ಅನಿವಾರ್ಯತೆ ಇದ್ದಾಗ ಮಾತ್ರ ಮನೆಯಿಂದ ಹೊರಗೆ ಬನ್ನಿ ಅನವಶ್ಯಕವಾಗಿ ಬರಬೇಡಿ ಹೊರಗೆ ಬರುವಾಗ ಮಾಸ್ಕ್ ಧರಿಸಿ ಮತ್ತು ಸ್ಯಾನಿಟೈಜರ್ ಬಳಸುವಂತೆ ಹೇಳುವ ಮೂಲಕ ಜನರಲ್ಲಿ ಕೊರೊನಾ ಹರಡದಂತೆ ಮತ್ತು ಅಮೂಲ್ಯ ಜೀವಗಳನ್ನು ಉಳಿಸುವಂತೆ ಹಾಗೂ ಲಾಕ್ ಡೌನ್ ಗೆ ಸಹಕರಿಸುವಂತೆ ಜಾಗೃತಿ ಮೂಡಿಸುವ ಕೆಲಸಕ್ಕೆ ಅಥಣಿ ತಾಲೂಕಿನ ಕಾರ್ಯನಿರತ ಪತ್ರಕರ್ತರು ಮುಂದಾಗುವ ಮೂಲಕ ನಮ್ಮ ಸಾಮಾಜಿಕ ಜವಾಬ್ದಾರಿ ಮೆರೆದಿದ್ದೇವೆ ಎಂದು ಹೇಳಿದರು.
ಈ ವೇಳೆ ಅಥಣಿ ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶೇಖರ ತೆವರಟ್ಟಿ.ಉಪಾಧ್ಯಕ್ಷ ಅಣ್ಣಾ ಸಾಹೇಬ್ ತೇಲಸಂಗ.ಸಿ ಎ ಇಟ್ನಾಳಮಠ.
ಪ್ರಧಾನ ಕಾರ್ಯದರ್ಶಿ ದೀಪಕ ಶಿಂಧೇ, ಕಾರ್ಯದರ್ಶಿ ಪ್ರಕಾಶ ಕಾಂಬಳೆ,ಖಜಾoಚಿ ಸತೀಶ ಕೋಳಿ ಹಾಗೂ ಸದಸ್ಯರಾದ ಶಿವಕುಮಾರ ಅಪರಾಜ. ವೇಕಟೇಶ ದೇಶಪಾಡೆ.ರಮೇಶ್ ಬಾದವಾಡಗಿ. ರಾಕೇಶ್ ಮೈಗೂರ, ಮತ್ತು ಮಾನವ ಹಕ್ಕು ಸಂಘಟನೆಯ ಅಬ್ದುಲ್ ಜಬ್ಬಾರ ಚಿಂಚಲಿ,ಪತ್ರಕರ್ತರಾದ ಮಹಂತೇಶ್ ಬನಸೋಡೆ,ಪರಶುರಾಮ ಚುಬಚಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಾರ್ವಜನಿಕರು ಸಕಾರತ್ಮಕವಾಗಿ ಸ್ಪಂದಿಸುತ್ತಿಲ್ಲ ; ಅಸಿಸ್ಟೆಂಟ್ ಕಮಿಷನರ್ ಸಿದ್ದು ಹುಲ್ಲೋಳಿ

ಮಹಾಲಿಂಗಪುರ : ಮಾರಕ ರೋಗ ಕೋವಿಡ-೧೯ ಎಂಬ ಕೋರೋಣ ವೈರಸ್ ಹತೋಟಿಗೆ ತರುವ ಸಲುವಾಗಿ ಅನೇಕ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಿದರೂ ಸಹ ಸಾರ್ವಜನಿಕರು ಸಕಾರತ್ಮಕವಾಗಿ ಸ್ಪಂದಿಸುತ್ತಿಲ್ಲವೆoದು ಜಮಖಂಡಿ ವಿಭಾಗದ ಅಸಿಸ್ಟೆಂಟ್ ಕಮಿಷನರ್ ಡಾ.ಸಿದ್ದು ಹುಲ್ಲೋಳಿ ತಮ್ಮ ಅಳಲನ್ನು ತೋಡಿಕ್ಕೊಂಡಿದ್ದಾರೆ.
ಪಟ್ಟಣದ ಪರಿಸ್ಥಿತಿಯ ಅವಲೋಕನ ಮಾಡಿ ಬುದ್ನಿ(ಪೀಡಿ) ಚೆಕ್ಪೋಸ್ಟ್ ಹತ್ತಿರ ಮಾತನಾಡುತ್ತಿದ್ದ ಅವರು ಅನೇಕ ಪರಿಹಾರಗಳನ್ನು ತಿಳಿಸಿದರೂ ಕೂಡ ಜನತೆ ತಮ್ಮದೇಯಾದ ಜೀವನ ಶೈಲಿಯನ್ನು ಮುಂದುವರಿಸಿಕೊoಡು ಹೋಗುತ್ತಿದ್ದಾರೆ. ಈಗಾಗಲೇ ಪ್ರಪಂಚದಾದ್ಯoತ ಈ ಭಯಾನಕ ರೋಗದಿಂದ ಲಕ್ಷಾಂತರ ಜನರು ಬಲಿಯಾಗುತ್ತಿದ್ದ ವಿಷಯ ಕಳವಳಕಾರಿಯಾಗಿದೆ.ಈ ರೋಗದಿಂದ ದೇಶದ ಜನತೆಯ ಸುರಕ್ಷತೆಗಾಗಿ ಸರ್ಕಾರ, ಅಧಿಕಾರಿಗಳು ಹಲವಾರು ರೀತಿಯ ಪ್ರಯತ್ನಗಳು ಸಾಗಿವೆ ವರಸೆಗಳನ್ನು ಪ್ರಯೋಗಿಸುತ್ತಾ ಹತೋಟಿಗೆ ತರಲು ಪ್ರಯತ್ನಿಸಿದ್ದಾರೆ. ಈ ಪ್ರಯತ್ನಕ್ಕೆ ಜನತೆ ಸರಿಯಾಗಿ ಸ್ಪಂದಿಸಿದರೆ ರೋಗವನ್ನು ಹತೋಟಿಯಲ್ಲಿಡಬಹುದು ಬೇಕಾಬಿಟ್ಟಿಯಾಗಿ ಎಲ್ಲೆಂದರಲ್ಲಿ ಗುಂಪು ಗುಂಪಾಗಿ ವರ್ತಿಸಿ ಸಮುದಾಯಗಳಲ್ಲಿ ವೈರಸ್ ಏನಾದರೂ ಕಂಡು ಬಂದರೆ ಈ ರೋಗದಿಂದ ದೇಶದ ಪರಿಸ್ಥಿತಿ ಇನ್ನಷ್ಟು ಜಟಿಲವಾಗಲಿದೆ ಕಾರಣ ಪಟ್ಟಣದಲ್ಲಿ ಇನ್ನಷ್ಟು ಬಿಗಿ ಭದ್ರತೆ ಏರ್ಪಡಿಸಿ ಸುತ್ತಲೂ ನಾಕಾಬಂದಿ ಹಾಕಲಾಗಿದೆ ಎಂದರು.
ಪಟ್ಟಣದ ಅವಲೋಕನದ ಸಂಧರ್ಭದಲ್ಲಿ ತಹಸೀಲ್ದಾರ್ ಪ್ರಶಾಂತ ಚನಗೊಂಡ,ಪುರಸಭೆ ಮುಖ್ಯಾಧಿಕಾರಿ ಬಾಬುರಾವ ಕಮತಗಿ, ಆರೋಗ್ಯ ಇಲಾಖೆ ಸಿಬ್ಬಂದಿ,ಪೊಲೀಸ್ ಇಲಾಖೆ, ಗ್ರಹ ರಕ್ಷಕ ದಳ ಸಿಬ್ಬಂದಿಗಳಿದ್ದರು.

ಕೋರೊನ ವೈರಸ್ ಹರಡದಂತ್ತೆ ಮುಂಜಾಗ್ರತ ಕ್ರಮವಾಗಿ ರಾಸಾಯನಿಕ ಕೀಟನಾಶಕ ಔಷಧಿ ಸಿಂಪಡಣೆ.

ಮುಗಳಖೋಡ: ದೇಶದಲ್ಲಿ ಮಾರಕ ಕೋರೊನ ವೈರಸ್ ರೋಗ ಹರಡದಂತೆ ಮುಂಜಾಗ್ರತ ಕ್ರಮವಾಗಿ ಪ್ರದಾನಿ ಮೋದಿಯವರ ಸೂಚನೆಯಂತೆ ಎಪ್ರೀಲ್ ೧೪ ರ ವರೆಗೆ ದೇಶಾದ್ಯಂತ ಜಾರಿಯಲ್ಲಿರುವ ಕರ್ಪ್ಯೂ ಹಿನ್ನೆಲೆಯಲ್ಲಿ ಹುಕ್ಕೇರಿ ಪಟ್ಟಣದ ಪುರಸಭೆ ಕಾರ್ಯಾಲಯದ ಸಮ್ಮುಖದಲ್ಲಿ ಹಾಗೂ ಅಗ್ನಿಶಾಮಕ ದಳದ ಸಹಯೋಗದೊಂದಿಗೆ ಈ ಕೋರೊನ ವೈರಾಣು ಬರಬಾರದೆಂದು ಹಾಗೂ ಒಬ್ಬರಿಂದ ಮತ್ತೊಬ್ಬರಿಗೆ ಹರಡದಂತ್ತೆ ಮುಂಜಾಗೃತ ಕ್ರಮವಾಗಿ ಪಟ್ಟಣದ ಬಜಾರ್, ರೇಣುಕಾಚಾರ್ಯ ನಗರ, ಜೈ ನಗರ, ಆದರ್ಶ ನಗರ, ಸರ್ಕಲ್ ಸೇರಿದಂತ್ತೆ ಪಟ್ಟಣದ ವಿವಿದ ನಗರಗಳಲ್ಲಿ ಈ ರಾಸಾಯನಿಕ ಕೀಟನಾಶಕ ಔಷಧಿಯನ್ನು ಸಿಂಪಡಿಸಲಾಯಿತು.
ಈ ಸಂದರ್ಬದಲ್ಲಿ ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ್, ಪುರಸಭೆ ಸದಸ್ಯರಾದ ಸದಾಶಿವ ಕರೆಪ್ಪಗೋಳ, ಆನಂದ ಗಂಧ, ಪಟ್ಟಣದ ನಿವಾಸಿಗಳಾದ ಶಂಕರ ಕೋಳಿ, ಸುಭಾಸ ಹೋಸಮಣಿ, ನೇಹಲ್ ಸನ್ನ್ನಾಯಿಕ, ಅಮೀತ್ ಪರೀಟ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಯವರು ಉಪಸ್ಥಿತರಿದ್ದರು.

ಉತ್ತಮ ಕೆಲಸಗಾರತಿ ಎಂದು ಹೆಸರು ಪಡೆಡಿರುವ ನಿಪ್ಪಾಣಿ ಶಾಸಕಿ : ಶಶಿಕಲಾ ಜೋಲ್ಲೆ

ಚಿಕ್ಕೋಡಿ : ನಿಪ್ಪಾಣಿ ಪಟ್ಟಣದಲ್ಲಿ ಭಾನುವಾರ ಆಯೋಜಿಸಿದ ಕೊರೊನಾ ಸೋಂಕು ಹರಡುವುದನ್ನು ತಡೆಯಲು ಸರ್ಕಾರ ನೀಡಿರುವ ನಿಯಮಗಳನ್ನು ಗಾಳಿಗೆ ತೂರಿ , ರಾಜ್ಯದಲ್ಲಿ ಉತ್ತಮ ಕೆಲಸಗಾರತಿ ಎಂದು ಹೆಸರು ಪಡೆಡಿರುವ ನಿಪ್ಪಾಣಿ ಶಾಸಕಿ ಹಾಗೂ ಮಹಿಳಾ ಮತ್ತು ಮಕ್ಕಳ ಇಲಾಖೆ ಸಚಿವೆ ಶಶಿಕಲಾ ಜೋಲ್ಲೆ ಅವರು ಬಿಜೆಪಿಯ ನೂರಾರು ಕಾರ್ಯಕರ್ತರೊಂದಿಗೆ ಒಂದು ಕಡೆ ಸೇರಿ ಸಾಮೂಹಿಕ ಕಾರ್ಯಕ್ರಮ ಮಾಡುವ ಮೂಲಕ , ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟ ಆಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ನಾಯಕರು ಆರೋಪವಾಗಿದೆ. ಈ ಕುರಿತಂತೆ ಫೋಟೋಗಳು ಮತ್ತು ವಿಡಿಯೋ ತೆಗೆದಿರುವ ಸಾಕ್ಷಿಗಳನ್ನು ನಮ್ಮ ಹತ್ತಿರ ಇವೆ ಇವುಗಳನ್ನು ನಾವು ರಾಜ್ಯಪಾಲರು , ಮುಖ್ಯಮಂತ್ರಿ ಬಿ . ಎಸ್ . ಯಡಿಯೂರಪ್ಪ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಕಳಿಸಲಾಗಿದೆ . 144 ಸೆಕ್ಷನ್ ಜಾರಿ ಅಡಿ ಹೇರಲಾಗಿದ್ದ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಗುಂಪುಗೂಡಿ ಕಾರ್ಯಕ್ರಮ ಮಾಡಿರುವುದನ್ನು ಖಂಡಿಸಿ ಸ್ಥಳೀಯ
ನಿಪ್ಪಾಣಿ ತಹಶೀಲದಾರ ಅವರಿಗೆ ದೂರು ಸಲ್ಲಿಸಲಾಗಿದೆ .ಕಾಂಗ್ರೇಸ್ ಪಕ್ಷದ ಮಾಜಿ ಸಚಿವ ವೀರಕುಮಾರ ಪಾಟೀಲ , ಮಾಜಿ ಶಾಸಕರಾದ ಕಾಕಾಸಾಹೇಬ ಪಾಟೀಲ ಮತ್ತು ಸುಭಾಷ ಜೋಶಿ ಹಾಗೂ ಲಕ್ಷ್ಮಣರಾವ ಚಿಂಗಳೆ ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷರು ಎಲ್ಲರೂ ಸೇರಿ ದೂರು ಸಲ್ಲಿಸಿದ್ದಾರೆ. ಕೊರೊನಾ ಭೀತಿಯ ಸಂದರ್ಭದಲ್ಲಿ ಪೊಲೀಸರನ್ನು ಹುರಿದುಂಬಿಸಲು ಸಚಿವೆ ಜೊಲ್ಲೆ ಅವರು ನಿಪ್ಪಾಣಿ ಪಟ್ಟಣದ ಶಿವಾಜಿ ಕಾಲೊನಿಯಲ್ಲಿ ತಮ್ಮ ಕಾರ್ಯಕರ್ತರೊಂದಿಗೆ ಭಾನುವಾರ ಸಂಜೆ ಕಾರ್ಯಕ್ರಮ ಆಯೋಜಿಸಿದ್ದರು . ಕಾರ್ಯಕ್ರಮದಲ್ಲಿ ಹಿಂದಿ ಮತ್ತು ಮರಾಠಿ ಜನಪ್ರಿಯ ದೇಶಭಕ್ತಿ ಗೀತೆಗಳಿಗೆ ಕಾರ್ಯಕರ್ತರು ಚಪ್ಪಾಳೆ ತಟ್ಟಿದರು . ಕೆಲವು ಕಾರ್ಯಕರ್ತರು ಮತ್ತು ಅವರಿಗೆ ಜೊತೆಯಾಗಿ ಕೆಲವು ಪೊಲೀಸರು ಹಾಡುಗಳಿಗೆ ಹೆಜ್ಜೆ ಹಾಕುತ್ತಿರುವುದು ಕ್ಯಾಮರಾದಲ್ಲಿ ರೆಕಾರ್ಡ್ ಇದೆ . “ ಪೊಲೀಸರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ . ಅವರಿಗೆ ಪ್ರೋತ್ಸಾಹ ಕೊಡಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ . ಆದರೆ , ಅದೇ ನೆಪದಲ್ಲಿ ಪೊಲೀಸರ ಜೊತೆ ಸೇರಿಕೊಂಡು ಪ್ರಧಾನಿಯವರ ಘೋಷಣೆಯನ್ನು ಉಲ್ಲಂಘಿಸುವುದು , ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ತಮ್ಮ ಕಾರ್ಯಕರ್ತರೊಂದಿಗೆ ಗುಂಪು ಗೂಡುವುದು
ಡಿಸ್ಟನ್ಸಿಂಗ್ ಸೇರಿದಂತೆ ಇತರೆ ಸುರಕ್ಷತಾ ಕ್ರಮಗಳನ್ನು ಪಾಲಿಸುವುನ್ನು ಮರೆತು ಇದರಿಂದ ಸೋಂಕು ಹರಡಲು ಸರ್ಕಾರದ ಪ್ರತಿನಿಧಿಗಳೇ ಅವಕಾಶ ಮಾಡಿ ಕೊಟ್ಟಂತಾಗುತ್ತದೆ . ಸಾರ್ವಜನಿಕರು ಮನೆಯಿಂದ ಹೊರ ಬಂದರೆ ಲಾಠಿ ಬೀಸುವ ಪೊಲೀಸರು , ಬಿಜೆಪಿ ಶಾಸಕರು ಮತ್ತು ಕಾರ್ಯಕರ್ತರೊಂದಿಗೆ ಸೇರಿ ಹಾಡುಗಳಿಗೆ ಹೆಜ್ಜೆ ಹಾಕಿದ್ದು ಅಕ್ಷಮ್ಯ . ಈ ರೀತಿ ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟ ಆಡುವುದನ್ನು ನಾವು ಖಂಡಿಸುತ್ತೇವೆ ‘ ಎಂದು ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಲಕ್ಷ್ಮಣರಾವ ಚಿಂಗಳೆ ತಿಳಿಸಿದರು

ಕೊರೊನಾ ವೈರಸ್ ; ಜೀವ ಇದ್ದರೆ ಮುಂದಿನ ಜೀವನ : ಬಸವರಾಜ ಹೆಗ್ಗನಾಯಕ್

ಹಳ್ಳೂರ : ಕಾಯುವವರಿಗೆ ಒಳ್ಳೆಯ ಸಂಗತಿಗಳು ಬಂದೇ ಬರುತ್ತದೆ. ಆದರೆ ತಾಳ್ಮೆ ಇರುವದರಿಂದ ಅತ್ಯುತ್ತಮ ದಿನಗಳು ಎದುರಾಗುವುದು ಖಚಿತ, ಎಂಬ ವಾಕ್ಯದಂತೆ ಸರ್ಕಾರದ ಆದೇಶವನ್ನು ನಾವು ಎಲ್ಲರೂ ಪಾಲಿಸಿದರೆ ಈ ಕೊರೊನಾ ವೈರಸ್ ದಿಂದ ಮುಕ್ತಿ ದೊರೆತು ಒಳ್ಳೆಯ ದಿನಗಳು ಬರುತ್ತವೆ. ಜೀವ ಇದ್ದರೆ ಮುಂದಿನ ಜೀವನ ಮಾಡಲು ಸಾಧ್ಯ, ಆದರಿಂದ ಎಲ್ಲ ನಾಗರಿಕರು ಕೊರೊನಾ ಹರಡದಂತೆ ನೋಡಿಕೊಳ್ಳೋಣಾ ಎಂದು ಮೂಡಲಗಿ/ಗೋಕಾಕ ತಾಲೂಕಾ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಕ ಹೇಳಿದರು.
ಕೆಎಮ್‌ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೋಳಿ ಅವರ ಮಾರ್ಗದರ್ಶನದಲ್ಲಿ ನಡೆದ ಕೊರೊನಾ ಮುಂಜಾಗ್ರತಾ ಕಾರ್ಯಕ್ರಮವನ್ನು ಸ್ಯಾನಿಟೈಜರ್‌ದಿಂದ ಕೈ ತೊಳೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಇಡೀ ವಿಶ್ವದ ತುಂಬೆಲ್ಲಾ ಮರಣ ಮೃದಂಗ ಭಾರಿಸುತ್ತಿರುವ ಕೊರೊನಾ ವೈರಸ್ ರೋಗವನ್ನು ತಡೆಗಟ್ಟುವ ಸಲುವಾಗಿ ಪ್ರಧಾನಿಯವರು ೨೧ ದಿನಗಳ ಕಾಲ ಲಾಕ್ ಡೌನ್ ಮಾಡಿದ್ದಾರೆ. ಲಾಕ್ ಡೌನ್ ಅಂದರೆ ಅಂಗಡಿ ಮುಗ್ಗಟ್ಟುಗಳು, ಬಸ್ ಸಂಚಾರ ಅಷ್ಟೇ ಬಂದ್ ಅಲ್ಲ. ಮನುಷ್ಯ ತನ್ನ ಮನೆಯಿಂದ ಹೊರಗೆ ಬರದಂತೆ ನಿರ್ಬಂಧ ಹಾಕಿಕೊಂಡಾಗ ಮಾತ್ರ ಆದೇಶಕ್ಕೆ ಬೆಲೆ ಕೊಟ್ಟಂತೆ ಆಗುತ್ತದೆ.
ಕೊರೊನಾ ರೋಗಕ್ಕೆ ಒಂದೇ ಒಂದು ಔಷಧಿ ಅಂದರೆ ಅದು ನಾವೇಲ್ಲರೂ ಮನೆಯಲ್ಲಿ ಇರುವುದೆ ಆ ರೋಗಕ್ಕೆ ಔಷಧಿ ಆದರಿಂದ ಹಳ್ಳೂರ ಗ್ರಾಮದ ಸಾರ್ವಜನಿಕರು ತಮ್ಮ ಜೀವ ಉಳಿಸಿಕೊಳ್ಳಬೇಕಾದರೆ ತಮ್ಮ ಕೈ ತೊಳೆದುಕೊಂಡು, ಮುಖಕ್ಕೆ ಮಾಸ್ಕ್ ಹಾಕಿಕೊಂಡು, ತಮ್ಮ ಮನೆ ಬಿಟ್ಟು ಹೊರಗಡೆ ಬಾರದಂತೆ ಇದ್ದರೆ ತಮ್ಮ ಜೀವ ಅಷ್ಟೇ ಅಲ್ಲ ಇಡೀ ಗ್ರಾಮದ ಜನರ ಜೀವ ಉಳಿಸಿದಂತೆ ಎಂದು ಹೇಳಿದರು.
ಪೋಲಿಸ್ ಅಧಿಕಾರಿಗಳು ಜನರ ಸೇವೆಗಾಗಿ ತಮ್ಮ ಜೀವನ ಮುಡಿಪ್ಪಾಗಿಟ್ಟು ಕಾರ್ಯ ನಿರ್ವಹಿಸುತ್ತಿದ್ದಾರೆ. ಅಧಿಕಾರಿಗಳು ಜನರಿಗೆ ಎಷ್ಟೇ ಜಾಗೃತಿ ಮೂಡಿಸಿದರು ಸಾರ್ವಜನಿಕರು ತಿಳಿದುಕೊಳ್ಳತ್ತಿಲ್ಲಾ. ಹೊರಗಡೆ ಬರಬೇಡಿ ಎಂದು ಹೇಳಿದರು ಕೇಳುತ್ತಿಲ್ಲ, ಆದಷ್ಟು ಜನರು ಹೊಗಡೆ ಬರದಿಂದರೆ ನಮ್ಮ ದೇಶ ನಮ್ಮ ರಾಜ್ಯದ ಜನರನ್ನು ರಕ್ಷಿಸಿಕೊಳ್ಳಬಹುದು ಎಂದು ಹೇಳಿದರು.
ಗ್ರಾಮದ ಬೀಟ್ ಪೋಲಿಸ್ ಎನ್ ಎಸ್ ಒಡೆಯರ ಮಾತನಾಡಿ, ನಾವು ಇಷ್ಟು ಕಷ್ಟಪಟ್ಟು ಕೆಲಸ ಮಾಡುತ್ತಿರುವುದು ಜನರ ರಕ್ಷಿಸುವ ಸಲುವಾಗಿ. ಜನರು ನಮ್ಮ ಜೊತೆ ಕೈ ಜೋಡಿಸಿದರೆ ನಮ್ಮ ಗ್ರಾಮದಲ್ಲಿ ಕೊರೊನಾ ವೈರಸ್ ಹರಡದಂತೆ ತಡೆಗಟ್ಟಬಹುದು ಎಂದು ಹೇಳಿದರು.
ಎಚ್ ವೈ ತಾಳಿಕೋಟಿ, ಸಂಜು ಅಗ್ನೆಪ್ಪಗೊಳ, ಮಹಾದೇವ ಕುಲಕರ್ಣಿ, ಎಸ್ ಎಚ್ ವಾಸನ್, ಮುರಿಗೆಪ್ಪ ಮಾಲಗಾರ ಪ್ರಾಸ್ಥಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ತಾಪಂ ಗೋಕಾಕ ಉಪನಿರ್ದೇಶಕ ಎಸ್ ಎಚ್ ದೇಸಾಯಿ, ಗ್ರಾಪಂ ಉಪಾಧ್ಯಕ್ಷ ಉಮೇಶ ಸಂತಿ, ಗ್ರಾಪಂ ಸದಸ್ಯರಾದ ಲಕ್ಷö್ಮಣ ಕತ್ತಿ, ಬಾಹುಬಲಿ ಸಪ್ತಸಾಗರ, ಮಲ್ಲಪ್ಪ ಹೊಸಟ್ಟಿ, ಸಂಗಪ್ಪ ಪಟ್ಟಣಶೆಟ್ಟಿ, ಅಶೋಕ ಬಾಗಡಿ, ಭೀಮಪ್ಪ ಹೊಸಟ್ಟಿ, ಗಂಗಪ್ಪ ಅಟಮಟ್ಟಿ, ಮಾಜಿ ಜಿಪಂ ಸದಸ್ಯ ಭೀಮಶಿ ಮಗದುಮ್ಮ, ಹಾಗೂ ಸುತ್ತಮುತ್ತಲಿನ ಗ್ರಾಪಂ ಪಿಡಿಓ ಅಧಿಕಾರಿಗಳು, ಶಾಲಾ ಶಿಕ್ಷಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ಇದ್ದರು. ವೈ ಬಿ ಕಳ್ಳಿಗುದ್ದಿ ನಿರೊಪಿಸಿದರು.

WhatsApp
Follow by Email