
ಅಥಣಿಯ ಉಪ ಮುಖ್ಯಮಂತ್ರಿಗಳ ನಿವಾಸದಲ್ಲಿ ಚೆಕ್ಕನ್ನು ನೀಡಿ ಮಾತನಾಡಿದ ರಾವಸಾಬ ಬಿರಾದಾರ ಪಾಟೀಲ ಜಗತ್ತಿಗೆ ಜಗತ್ತೆ ಬೆಚ್ಚಿ ಬೀಳುವಂತಹ ಪರಿಸ್ಥಿತಿಯಲ್ಲಿ ನಾವಿದ್ದೇವೆ ಅದಕ್ಕಾಗಿ ಪ್ರತಿಯೊಬ್ಬ ಸ್ಥಿತಿವಂತರು ತಮ್ಮ ಶಕ್ತಾನುಸಾರ ಸರಕಾರಕ್ಕೆ ಸಹಾಯವನ್ನು ನೀಡಿ ಸಹಕರಿಸಬೇಕು
ಈ ಸಂದರ್ಭದಲ್ಲಿ ಕೇಂದ್ರ-ರಾಜ್ಯ ಸನ್ನಿವೇಶವನ್ನು ಸಮರ್ಪಕವಾಗಿ ನಿಭಾಯಿಸಬೇಕಾದರೆ ಕೇವಲ ಸರ್ಕಾರಗಳಿಂದ ಮಾತ್ರ ಪರಿಹಾರ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ನಾವೆಲ್ಲರೂ ಸರಕಾರದ ಜೊತೆ ನಿಂತು ಸಾರ್ವಜನಿಕರು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಚೆಕ್ ನೀಡಿದ ರಾವಸಾಬ ಲ ಬಿರಾದಾರ ಪಾಟೀಲ ಹಾಗೂ ಗ್ರಾಮದ ಗಣ್ಯರಾದ ಸುರೇಶ ವಾಡೆದ, ಅಶೋಕ ಗುಮಚಿ ಇನ್ನೂ ಅನೇಕರು ಉಪಸ್ಥಿತರಿದ್ದರು.