ಪೋಲಿಸರಿಗೆ ಅಲ್ಪೋಪಹಾರ ನೀಡಿದ ಅಥಣಿ ನ್ಯಾಯವಾದಿಗಳು

ಅಥಣಿ : ಪಟ್ಟಣದಲ್ಲಿ
ಕರ್ತವ್ಯ ನಿರತ ಪೋಲಿಸ್ ಸಿಬ್ಬಂದಿಗೆ ನ್ಯಾಯವಾದಿಗಳ ಸಂಘದಿಂದ ಅಲ್ಫೊಪಹಾರ ವ್ಯವಸ್ಥೆ ಮಾಡಲಾಗಿತ್ತು.ಜಾಗತಿಕ ಮಹಾಮಾರಿ ಕೊರೊನಾ ಹರಡದಂತೆ ತಡೆಯಲು ಭಾರತ ಲಾಕ್ ಡೌನ್ ಬೆನ್ನಲ್ಲೆ ಅಥಣಿ ಪಟ್ಟಣದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಶ್ರಮಿಸುತ್ತಿರುವ ಅಥಣಿ ಪಟ್ಟಣದ ಪೋಲಿಸ್ ಸಿಬ್ಬಂದಿಯ ಕಾರ್ಯ ಶ್ಲಾಘನೀಯ ವಾಗಿದೆ.ಜನರು ಪ್ರಧಾನಿ ಮೋದಿ ಅವರ ಮಾತಿಗೆ ಬೆಲೆ ಕೊಟ್ಟು ಮನೆಯಲ್ಲಿ ಉಳಿಯುವ ಮೂಲಕ ತಮ್ಮ ಹಾಗೂ ಸಾರ್ವಜನಿಕರ ಹಿತ ಕಾಯಬೇಕು ಎಂದು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ ಎ ವನಜೋಳ ಹೇಳಿದರು.
ಇದೆ ವೇಳೆ ಮಾತನಾಡಿದ ನ್ಯಾಯಾಧೀಶರು ಜನರು ಪ್ರಧಾನಿಗಳು, ಸೆಲೆಬ್ರಿಟಿ ಗಳು,ಮತ್ತು ಸರ್ಕಾರದ ಅಂಗಗಳು ಈ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿದ್ದು ಸಾರ್ವಜನಿಕ ಸಹಕಾರ ಅಗತ್ಯ ಆಗಿದ್ದು ಕಾರಣ ಇಲ್ಲದೆ ಮನೆಯಿಂದ ಹೊರಗೆ ಬರಬಾರದು ಎಲ್ಲರೂ ಇದನ್ನು ಪಾಲಿಸಬೇಕು ಎಂದು
ಹಿರಿಯ ಪ್ರಧಾನ ಸಿವಿಲ್ ನ್ಯಾಯಾಧಿಶ ಗುರುರಾಜ ಶಿರೋಳ ಅವರು ಮನವಿ ಮಾಡಿದರು.
ಈ ವೇಳೆ
ಪ್ರಧಾನ ಸಿವಿಲ್ ಹಾಗೂ ಜೆ ಎಮ್ ಎಪ್ ಸಿ ನ್ಯಾಯಾಧೀಶರು ವಿಶ್ವನಾಥ ಗೌಡರ.ಮತ್ತು ನ್ಯಾಯವಾದಿಗಳ ಸಂಘದ ಕೆ ಎ ವನಜೋಳ,ಕೆ ಎಲ್ ಕುಂದರಗಿ,ಆರ್ ಕೆ ದೇಸಾಯಿ, ಬಿ.ಬಿ.ಬಿಸಲಾಪುರ್,ಎಸ್ ಆರ್ ಪಾಟಿಲ,ಎನ್ ಬಿ ಕೋಕಲೆ,ಎಸ್ ಎ ಸಂಕ, ಎಸ್ ಆರ್ ಪಾಟೀಲ, ಎಸ್ ವಿ ಚೌಗಲಾ,ಡಿ ಬಿ ಠಕ್ಕನ್ನವರ ಸೇರಿದಂತೆ ಹಲವು ನ್ಯಾಯವಾದಿಗಳು ಮತ್ತು ಅಥಣಿ ಡಿವೈಎಸ್ ಪಿ ಎಸ್ ವಿ ಗಿರೀಶ ಸಿಪಿಐ ಶಂಕರಗೌಡ ಬಸನಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು
Share
WhatsApp
Follow by Email