ಹಳ್ಳೂರ : ಬಸವೇಶ್ವರ ಜಯಂತಿ ಹಾಗೂ ಬಸವೇಶ್ವರ ಜಾತ್ರೆ ರದ್ದು

ಹಳ್ಳೂರ ; ಕೊರೋನಾ ವೈರಸ್ ಇಡೀ ದೇಶದಾದ್ಯಾoತ ಮರಣ ಮೃದಂಗ ಭಾರಿಸುತ್ತಿರುವ ಹಿನ್ನೆಲೆ ಇಡೀ ದೇಶದ ತುಂಬೆಲ್ಲಾ ಸರಕಾರ ಲಾಕ್ ಡೌನ್ ಆದೇಶ ಹೊರಡಿಸಿದೆ. ಆದರಿಂದ ಇದೆ ತಿಂಗಳು 26/04/2020 ರಂದು ನಡೆಯಬೇಕಾಗಿದ್ದ ಬಸವ ಜಯಂತಿಯ ಆಚರಣೆಯನ್ನು ಹಾಗೂ ಬಸವೇಶ್ವರ ಜಾತ್ರೆಯನ್ನು ರದ್ದುಪಡಿಸಾಲಾಗಿದೆ ಎಂದು ಬಸವಶ್ರೀ ಸೇವಾ ಯುವಕ ಸಂಘದ ಅಧ್ಯಕ್ಷ ಬಸವರಾಜ್ ಬೋಳನ್ನವರ ಹೇಳಿದರು.

ಗ್ರಾಮದ ಬಸವ ನಗರ ತೋಟದ ಬಸವೇಶ್ವರ ದೇವಸ್ಥಾನದಲ್ಲಿ ಇಂದು ಸಂಜೆ ಕರೆಯಲಾದ ಸಭೆಯಲ್ಲಿ ಮಾತನಾಡಿ, ಈ ವರ್ಷ ಬಸವೇಶ್ವರ ಜಯಂತಿಯನ್ನು ತಮ್ಮ ತಮ್ಮ ಮನೆಗಳಲ್ಲಿ ಪೂಜೆ ಸಲ್ಲಿಸಿ ಆಚರಿಸಬೇಕು ಎಂದು ತೋಟದ ಎಲ್ಲ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಇಂದು ತೋಟದ ಪ್ರಮುಖರ ಸಭೆಯಲ್ಲಿ ಜಯಂತಿಯನ್ನು ರದ್ದುಪಡಿಸುವ ಕುರಿತು ನಿರ್ಣಯ ಕೈಗೊಳ್ಳಲಾಯಿತು. ಕೊರೋನಾ ರೋಗ ನಿಯಂತ್ರಣ ಹಾಗೂ ಹಾಗೂ ಸರ್ಕಾರದ ಆದೇಶದಂತೆ ನಾವೆಲ್ಲ ನಮ್ಮ ಮನೆಗಳಲ್ಲಿ ಶ್ರೀ ಬಸವ ಜಯಂತಿಯನ್ನು ಆಚರಿಸಬೇಕು ಹಾಗೆ ಯಾರು ಮನೆ ಬಿಟ್ಟು ಹೊರಗೆ ಬರಬೇಡಿ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ಲಕ್ಷ್ಮಣ ಯಡವನ್ನವರ, ರವೀಂದ್ರ ನುಚ್ಚುoಡಿ, ನಾಗಪ್ಪ ನಿಡೋಣಿ, ಅರುಣ ಬ್ಯಾಡಗಿ, ಬಸವರಾಜ್ ಮಹದೇವ್ ಬೋಳನವರ, ಶ್ರೀಶೈಲ ಬೋಳನವರ, ಪ್ರಭಾಕರ್ ಮಾಳಿ, ಅಡಿವೆಪ್ಪ ನುಚ್ಚುoಡಿ,ಮಲ್ಲಪ್ಪ ಬ್ಯಾಳಿ, ಶ್ರೀಶೈಲ್ ನಿಂಗನೂರ, ಹಣಮಂತ ಮುರಗೋಡ, ಆಪೋಜಿ ಬೋಳನ್ನವರ, ಬಸಪ್ಪ ಮುರಗೋಡ, ಮಲ್ಲು ಬೋಳನವರ ಇದ್ದರು.

ಲಾಕ್ ಡೌನ್ ಹಿನ್ನೆಲೆ ಬಸವೇಶ್ವರ ಜಯಂತಿ ರದ್ದು

ಮೂಡಲಗಿ; ಕೊರೋನಾ ನಿಯಂತ್ರಣ ನಿಮಿತ್ತ ಇಡೀ ದೇಶದ ತುಂಬೆಲ್ಲಾ ಸರಕಾರ ಲಾಕ್ ಡೌನ್ ಆದೇಶ ಹೊರಡಿಸಿದೆ. ಇದೇ ಕಾರಣಕ್ಕೆ ದಿನಾಂಕ 26/04/2020 ರಂದು ನಡೆಯಬೇಕಾಗಿದ್ದ ಬಸವ ಜಯಂತಿಯ ಆಚರಣೆಯನ್ನು ರದ್ದುಪಡಿಸಿ, ಜಯಂತಿಯನ್ನು ತಮ್ಮ ತಮ್ಮ ಮನೆಗಳಲ್ಲಿ ಪೂಜೆ ಸಲ್ಲಿಸಿ ಆಚರಿಸಬೇಕು ಎಂದು ಎಲ್ಲ ಶರಣ -ಶರಣೆಯರಲ್ಲಿ ಕೋರಿದ್ದಾರೆ.
ಈ ಬಗ್ಗೆ ಇಂದು ಪಟ್ಟಣದಲ್ಲಿ ಪ್ರಮುಖರ ಸಭೆಯಲ್ಲಿ ಜಯಂತಿಯನ್ನು ರದ್ದುಪಡಿಸುವ ಕುರಿತು ನಿರ್ಣಯ ಕೈಗೊಳ್ಳಲಾಯಿತು. ತದನಿಮಿತ್ತ ರೋಗ ನಿಯಂತ್ರಣ ಹಾಗೂ ಹಾಗೂ ಸರ್ಕಾರದ ಆದೇಶದಂತೆ ನಾವೆಲ್ಲ ನಮ್ಮ ಮನೆಗಳಲ್ಲಿ ಶ್ರೀ ಬಸವ ಜಯಂತಿಯನ್ನು ಆಚರಿಸಬೇಕು ಎಂದು ವೀರಶೈವ ಲಿಂಗಾಯತ ಸಮಾಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

ಸಿದ್ದು ಸವದಿ ಅಭಿಮಾನಿ ಬಳಗದಿಂದ ಬಡಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

ರಬಕವಿ-ಬನಹಟ್ಟಿ : ಈ ನರಭಕ್ಷಕ ಕರೋನಾ ರೋಗದಿಂದ ಸಂಕಷ್ಟದಲ್ಲಿರುವ ರಬಕವಿ-ಬನಹಟ್ಟಿ, ರಾಮಪೂರ, ಹೊಸೂರ ಸಾವಿರಕ್ಕೂ ಅಧಿಕ ಬಡ ಕುಟುಂಬಗಳಿಗೆ ಸಹಾಯ ಮಾಡಬೇಕೆಂಬ ಉದ್ದೇಶವನ್ನಿಟ್ಟುಕ್ಕೊಂಡು ಆಹಾರ ಕಿಟ್ ತಯಾರಿಸುವ ಕೆಲಸದಲ್ಲಿ ನಿರತರಾಗಿರುವ ಸಿದ್ದು ಸವದಿ ಅಭಿಮಾನಿ ಬಳಗ.
ಈ ವೇಳೆ ಶಾಸಕ ಸಿದ್ದು ಸವದಿ, ರಾಜು ಅಂಬಲಿ, ಪ್ರವೀಣ ಕೋಲಾರ, ಅರವಿಂದ ಹೊರಟ್ಟಿ, ಆನಂದ ಹಳ್ಯಾಳ, ಕುಮಾರ ಕದಮ, ಬಸು ಬಿಳ್ಳೂರ, ಶ್ರೀಶೈಲ ಬೀಳಗಿ, ಅಜಿತ ಮುರಗೋಡ, ಸುರೇಶ ಗೋಕಾವಿ, ಅರುಣ ಬುದ್ನಿ, ರಾಜು ವಗ್ಗ, ರಮೇಶ ಮಂಡಿ ಇದ್ದರು.

ಬಾಗಲಕೋಟೆ ಜಿಲ್ಲೆಯಲ್ಲಿ ಮೂರು ದಿನದಿಂದ ಯಾವುದೇ ಪಾಸಿಟಿವ್ ರೋಗಿಗಳ ಕಂಡು ಬಂದಿಲ್ಲ: ಜಿಲ್ಲಾಧಿಕಾರಿ ಕ್ಯಾ ಕೆ. ರಾಜೇಂದ್ರ

ಜಮಖಂಡಿ: ಬಾಗಲಕೋಟೆ ಜಿಲ್ಲೆಯಲ್ಲಿ ಮೂರು ದಿನದಿಂದ ಯಾವುದೇ ಪಾಸಿಟಿವ್ ರೋಗಿಗಳ ಕಂಡು ಬಂದಿಲ್ಲ, ಚಿಕಿತ್ಸೆ ಪಡೆದುಕೊಂಡ ಗುಣಮುಖರಾಗಿರುವ 6 ಜನರನ್ನು ಡಿಸ್‌ಸಾರ್ಜ್ ಮಾಡುವ ಪ್ರಕ್ರೀಯೆ ನಡೆದಿದೆ ವರದಿಗಾಗಿ ಕಾಯುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ಕ್ಯಾ ಕೆ. ರಾಜೇಂದ್ರ ಹೇಳಿದರು.
ನಗರದ ಬಾರ್ಪೆಟ್‌ಗಲ್ಲಿ ಹಾಗೂ ಅವಟಿಗಲ್ಲಿಯ ನಿಷೇಧಿತ ವಲಯಕ್ಕೆ ಭೆಟ್ಟಿ ನೀಡಿ ನಂತರ ಸುದ್ದಿಗಾರರ ಜೊತೆ ಮಾತನಾಡಿದರು.
ಜಿಲ್ಲೆ ರೆಡ್ ಜೋನ್‌ನಲ್ಲಿರುವುದರಿಂದ ಕೃಷಿ ಕೃಷಿ ಯೇತರ ಚಟುವಟಿಕೆ ಹೊರತು ಪಡಿಸಿ ಎಲ್ಲವನ್ನು ಬಂದ ಇಡಲಾಗುವುದು ಗ್ರೀನ್ ಜೋನ್ ನಮ್ಮಲ್ಲಿ ಅನ್ವಯಿಸುವದಿಲ್ಲ ಎಂದರು.
ಕೊನೆಯದಾಗಿ ಪಾಸಿಟಿವ್ ಬಂದ ರೋಗಿಯಿಂದ 28 ದಿನಗಳವರೆಗೆ ಲಾಕ್‌ಡೌನ್ ಮುಂದುವರೆಯಲಿದೆ ಎಂದರು.
ರಮಜಾನ್ ಇದ್ದರೂ ಮನೆಯಲ್ಲೆ ಆಚರಿಸಬೇಕು, ಕೊರೋನಾ ವೈರಸ್ ಯಾವುದೆ ಒಂದು ಕೋಮಿಗೆ ಬರುವದಿಲ್ಲ ಎಲ್ಲ ಧರ್ಮದವರಿಗೂ ಬರುತ್ತದೆ, ಕೋಮು ಸೌಹಾರ್ದತೆ ಕಾಪಾಡಿಕೊಳ್ಳಬೇಕು ಎಂದರು.
ಜಮಖAಡಿಯಲ್ಲಿ ಪಾಸಿಟಿವ್ ಬಂದಿದ್ದರಿAದ ವೈದ್ಯರು ಹೆದರಿದ್ದಾರೆ, ಐಎಂಎ ಅಧ್ಯಕ್ಷರಿಗೆ ನಗರದಲ್ಲಿ ಖಾಸಗಿ ಆಸ್ಪತ್ರೆಗಳು ತೆರೆಯುವಂತೆ ನಿರ್ದೇಶನ ನೀಡಲಾಗುವುದು ಎಂದರು.
ಬಾಗಲಕೋಟೆ ನಗರದಲ್ಲಿ ನಿಷೇಧಿತ ವಲಯದಲ್ಲಿನ ನಿವಾಸಿಗೆ 30 ದಿನದಿಂದ 30 ಸಾವಿರ ಜನರಿಗೆ ಅಗತ್ಯ ವಸ್ತುಗಳನ್ನು ಪೂರೈಸಲಾಗುತ್ತಿದೆ, ಜಮಖಂಡಿಯಲ್ಲೂ ಅಷ್ಟೆ ಯಾರಿಗೂ ತೊಂದರೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದರು.
ಕೊರೋನಾ ಹರಡದಂತೆ ಕಟ್ಟುನಿಟ್ಟಾಗಿ ಕ್ರಮ ಜರುಗಿಸಲಾಗುತ್ತಿದೆ, ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.
ಅನಾವಶ್ಯಕವಾಗಿ ಹೊರಗಡೆ ಗುಂಪು ಗೂಡಿ ನಿಲ್ಲುವುದು, ಕುಳಿತುಕೊಳ್ಳುವುದು, ಗಲ್ಲಿಗಳಲ್ಲಿ ಯಾರು ಅನಾವಶ್ಯಕವಾಗಿ ತಿರುಗಾಡದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಅಗತ್ಯ ವಸ್ತುಗಳು ನಿಮ್ಮ ಮನೆ ಬಾಗಿಲಿಗೆ ಬರುತ್ತವೆ ಅವುಗಳನ್ನು ತಾವು ಖರೀದಿಸಿ ತೆಗೆದುಕೊಳ್ಳಬಹುದು ಎಂದರು.
ಎಸ್ಪಿ ಲೊಕೇಶ ಜಗಲಾಸರ ಮಾತನಾಡಿ, ಕೊರೊಂಟಾದಲ್ಲಿ ಇರುವ ಪೊಲೀಸ್ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ಹಾಜರಾಗಿಲ್ಲ. ಅವರೆಲ್ಲರನ್ನೂ ಲಾಡ್ಜ್ಗಳಲ್ಲಿ ಕೊರೊಂಟೈನ್‌ನಲ್ಲಿ ಇಡಲಾಗಿದೆ ಎಂದರು.
ಸಿಬ್ಬAದಿಗಳ ಕೊರತೆ ಇರುವದರಿಂದ ಜಮಖಂಡಿಗೆ 20 ಜನ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಎಸಿ ಡಾ. ಸಿದ್ದು ಹುಲ್ಲೋಳಿ, ಡಿವೈಎಸ್‌ಪಿ ಆರ್.ಕೆ.ಪಾಟೀಲ, ತಹಸೀಲ್ದಾರ ಸಂಜಯ ಇಂಗಳೆ, ತಾಪಂ ಇಓ ಸಂಜು ಹಿಪ್ಪರಗಿ, ತಾಲೂಕಾ ಆರೋಗ್ಯಾಧಿಕಾರಿ ಡಾ. ಜಿ.ಎಸ್. ಗಲಗಲಿ ಪೌರಾಯುಕ್ತ ರಾಮಕೃಷ್ಣ ಸಿದ್ದನಕೊಳ್ಳ,ಸಿ.ಪಿ.ಐ.ಜಿ.ರುದ್ರೇಶಗೌಡ,ಪಿ.ಎಸ್.ಐ.ಬಸವರಾಜ ಅವಟಿ,ರವಿ ಶಿರಗುಪ್ಪಿ,ಉಮೇಶ ಜೋಶಿ ಇತರರು ಇದ್ದರು.

ಬೆಳಗಾವಿಯಲ್ಲಿ ಮತ್ತೆ ಇಬ್ಬರಿಗೆ ಸೋಂಕು; ರಾಜ್ಯದಲ್ಲಿ ಒಟ್ಟೂ 463 ; ಇಂದು ಒಂದೇ ದಿನ 18 ಸೋಂಕಿತರು

ಬೆಳಗಾವಿ  : ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 463ಕ್ಕೇರಿದೆ. ಇಂದು ಒಂದೇ ದಿನ 18 ಜನರಿಗೆ ಸೋಂಕು ದೃಢಪಟ್ಟಿದೆ.

ಬೆಳಗಾವಿ ಜಿಲ್ಲೆಯ ರಾಯಬಾಗದ ಇಬ್ಬರಿಗೆ ಸೋಂಕು ಪತ್ತೆಯಾಗಿದ್ದು, 
ಹೊಸದಾಗಿ ಸೋಂಕು ಬಾಧಿಸಿರುವವರಲ್ಲಿ ಒಬ್ಬರು 10 ವರ್ಷ ವಯಸ್ಸಿನ ಬಾಲಕಿಯಾಗಿದ್ದರೆ, ಇನ್ನೊಬ್ಬ 15 ವರ್ಷದ ಯುವಕನಾಗಿದ್ದಾನೆ. ಇಬ್ಬರೂ ರಾಯಬಾಗ ತಾಲೂಕು ಕುಡಚಿಯವರು. ಬೆಳಗಾವಿಯಲ್ಲೀಗ ಸೋಂಕಿತರ ಸಂಖ್ಯೆ 45ಕ್ಕೇರಿದೆ.

 

WhatsApp
Follow by Email