ಅಧಿಕಾರಿಗಳ ಸಭೆ, ಕ್ವಾರೇಂಟೇನ್ ಬಗ್ಗೆ ಎಚ್ಚರವಿರಲಿ.. ಡಿಸಿಎಮ್ ಲಕ್ಷ್ಮಣ ಸವದಿ



ಅಥಣಿ: ಕೊರೋನಾ ಮಹಾಮಾರಿ ಸೊಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ಅಥಣಿ ತಾಲ್ಲೂಕು ಆಸ್ಪತ್ರೆ ಭೇಟಿ ನೀಡಿದ ಡಿಸಿಎಂ ಲಕ್ಷ್ಮಣ ಸವದಿ ಅವರು ಸರಕಾರಿ ಆಸ್ಪತ್ರೆಯ ವೈದ್ಯರ ಜೊತೆ ಒಂದು ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿ ಮಾಹಿತಿ ಪಡೆದರು. ತಾಲೂಕಿನಲ್ಲಿ ಕಂಡು ಬಂದಿರುವ ಸೊಂಕಿತರ ಸಂಖ್ಯೆ ಮತ್ತು ತೆಗೆದುಕೊಳ್ಳುತ್ತಿರುವ ಮುನ್ನೆಚ್ಚರಿಕೆ ಕ್ರಮ ಹಾಗೂ ಚಿಕಿತ್ಸಾ ಕ್ರಮಗಳ ಕುರಿತು ಆಸ್ಪತ್ರೆಯಲ್ಲಿ ಪರಿಶೀಲನೆ ನಡೆಸಿದರು. ಅಲ್ಲದೆ ಅಥಣಿ ತಾಲೂಕಿನಲ್ಲಿ ದೆಹಲಿ ಜಮಾತ್‌ನಿಂದ ಬಂದಿರುವ ಜನರ ಮಾಹಿತಿ ಕೇಳಿದಾಗ ಸರಿಯಾದ ಮಾಹಿತಿ ಇಲ್ಲದ ಕಾರಣ ಕೆಲ ಹೊತ್ತು ಅಧಿಕಾರಿಗಳು ಮಾಹಿತಿ ಕೊಡಲು ತಡವರಿಸಿದ ಘಟನೆಯೂ ನಡೆಯಿತು. ಈ ವೇಳೆ ಆಸ್ಪತ್ರೆ ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನೀವು ಈ ವಿಷಯದಲ್ಲಿ ಯಾವುದೆ ಮಾಹಿತಿ ಇಲ್ಲಾ ಮಾಹಿತಿ ಕೊರತೆ ಇದೆ ಅನ್ನುವ ಹಾಗಿಲ್ಲಾ ಸರಿಯಾಗಿ ಕಾರ್ಯ ನಿರ್ವಹಿಸಿ ಎಂದು ಎಚ್ಚಿರಿಸಿದರು
ಡಿಸಿಎಂ ಲಕ್ಷ್ಮಣ ಸವದಿ ಅವರು ಎಲ್ಲ ಇಲಾಖೆಗಳು ಸರಿಯಾದ ಮಾಹಿತಿ ನೀಡಬೇಕು. ಬೆಳಗಾವಿ ಜಿಲ್ಲಾಡಳಿತ ಮತ್ತು ಪೋಲಿಸ್ ಇಲಾಖೆಯ ಮಾಹಿತಿಗೂ ತಾಲ್ಲೂಕು ಆಸ್ಪತ್ರೆ ಮಾಹಿತಿಗೂ ವ್ಯತ್ಯಾಸವಿದೆ. ತಕ್ಷಣ ನಿಮ್ಮ ಮಾಹಿತಿಯನ್ನು ಸರಿಪಡಿಸಿಕೊಳಿ ಎಂದು ಸಲಹೆ ನೀಡಿದರು. ಒಟ್ಟು ತಾಲ್ಲೂಕಿನಲ್ಲಿ 10 ಲಾಡ್ಜ್ ಗಳು ಮತ್ತು ಚಮಕೇರಿ, ಮಧಬಾಂವಿ, ಮೋಳೆ ಸೇರಿದಂತೆ ಹಲವೆಡೆ ಹಾಸ್ಟೆಲ್ ಗಳನ್ನು ಕಾಯ್ದಿರಿಸಲಾಗಿದೆ ಎಂದು ವೈದ್ಯಾಧಿಕಾರಿಗಳು ಹೇಳುತ್ತಿದ್ದಂತೆಯೆ ಡಿಸಿಎಮ್ ಲಕ್ಷ್ಮಣ ಸವದಿ ಕ್ವಾರಂಟೈನ್ ಪದದ ಅರ್ಥ ಎನೂ ಎಂದು ವೈದ್ಯರನ್ನು ಕೇಳಿದರು ಸರಿಯಾಗಿ ಹೇಳದೆ ಇದ್ದಾಗ. ಅವರೇ ಒಬ್ಬ ವ್ಯಕ್ತಿಯನ್ನು ಎಲ್ಲರ ಸಂಪರ್ಕದಿAದ ಸಂಪೂರ್ಣವಾಗಿ ಬೇರ್ಪಡಿಸಿ ಇಡುವದು ಈಗ ಸದ್ಯ ತಾವು ಹಾಸ್ಟೇಲ್‌ನ ಒಂದು ಹಾಲ್ ನಲ್ಲಿ ಇಟ್ಟರೆ ಅದು ಕ್ವಾರೇಂಟೇನ್ ಅಲ್ಲ, ಅಲ್ಲಿ ಯಾರಿಗಾದರೂ ಒರ್ವ ವ್ಯಕ್ತಿಗೆ ಕೊರೋನಾ ಸೋಂಕು ತಗುಲಿದ್ದರು ಅಲ್ಲಿರುವ ಉಳಿದವರಿಗೂ ಸೋಂಕು ತಗಲುತ್ತದೆ. ಆದ್ದರಿಂದ ಹಾಸ್ಟೇಲ್ ನಲ್ಲಿ ಇರುವ ಎಲ್ಲ ಕ್ವಾರೇಂಟೇನ್ ಮಾಡಿರುವವರನ್ನು ತಕ್ಷಣವೇ ಶೌಚಾಲಯ ಹೊಂದಿರುವ ಹೊಟೇಲ್ ಕೋಣೆಗಳಲ್ಲಿ ಇರಿಸಬೇಕು ಎಂದು ಆಜ್ಞೆ ಮಾಡಿದರು. ಪಟ್ಟಣದ ಹೊರವಲಯದಲ್ಲಿರುವ ಎಲ್ಲ ಹೊಟೇಲ್‌ಗಳನ್ನು ಗುರುತಿಸಿ ಅಲ್ಲಿ ಅವರನ್ನು ಇಡುವ ವ್ಯವಸ್ಥೆಯನ್ನು ಮಾಡಬೇಕು ಎಂದು ತಾಲೂಕು ವೈದ್ಯಧಿಕಾರಿಗಳಿಗೆ ತಿಳಿಸಿರು.
ಈ ವೇಳೆ ಅಥಣಿ ಸರಕಾರಿ ಆಸ್ಪತ್ರೆಯ ಸಿಎಂಓ, ಸಿ ಎಸ್ ಪಾಟೀಲ, ಟಿಹೆಚ್‌ಓ ಎಂ ಎಸ್ ಕೊಪ್ಪದ, ಹಾಗೂ ಡಾ. ಎಂ ಪಿ ಕಾಳೆಕರ, ಡಾ. ಚಿದಾನಂದ ಮೇತ್ರಿ, ಡಾ.ಬಾಳಾಸಾಹೇಬ ಇರಳಿ, ಸಿಬ್ಬಂದಿಗಳಾದ ಟಿ ಎಮ್ ನರಹಟ್ಟಿ, ನವೀನ ಕಾತ್ರಾಳ, ಬಿ ಎ ನೇಮಗೌಡ ಸೇರಿ ಹಲವು ಸಿಬ್ಬಂದಿಗಳು ಉಪಸ್ಥಿತರಿದ್ದರು
Share
WhatsApp
Follow by Email