ರಾಜ್ಯದಲ್ಲಿ ಇನ್ನು ನಾವು ಹೇಳುವದಿಲ್ಲ, ಕಾನೂನು ಮಾತನಾಡುತ್ತೆ.. ಡಿಸಿಎಂ ಲಕ್ಷ್ಮಣ ಸವದಿ



ಅಥಣಿ: ಪಾದರಾಯನಪೂರ ಗಲಾಟೆಗೆ ಈಗಾಗಲೇ ಕಾನೂನು ಅಸ್ತ್ರ ಸಿದ್ದವಾಗಿದೆ. ಸಚಿವ ಆರ್ ಅಶೋಕ ಮತ್ತು ಗೃಹ ಸಚಿವ ಬೊಮ್ಮಾಯಿ ಅವರು ಘಟನೆಯ ಮಾಹಿತಿಯನ್ನು ಅವತ್ತೆ ಪಡೆದಿದ್ದೇವೆ. ಮುಂಬರುವ ದಿನಗಳಲ್ಲಿ ಪುಂಡಾಟಿಕೆ ಮುಂದುವರಿದರೆ ಅದು ಯಾರೇ ಇದ್ದರೂ ನಾವು ಮಾತನಾಡುವದಿಲ್ಲ ಕಾನುನು ಮಾತನಾಡಲಿದೆ. ಎಂದು ಅಥಣಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಸುದ್ದಿಗಾರಗಿಗೆ ತಿಳಿಸಿದರು.
ರಾಜ್ಯದ ಸುಗ್ರೀವಾಜ್ಞೆ ಕೊರೋನಾ ವಾರಿಯರ್ಸ್ಗೆ ಆನೆ ಬಲ, ಮತ್ತು ನೈತಿಕ ಬಲವನ್ನು ತುಂಬಲಿದೆ. ಕರ್ತವ್ಯ ನಿರತ ಸಿಬ್ಬಂದಿ ಮೇಲಿನ ಹಲ್ಲೆಗೆ ಕಡಿವಾಣ ಹಾಕಲಿದೆ. ರಾಜ್ಯದಲ್ಲಿ ಕರೊನಾ ವೈರಸ್ ತಡೆಯುವ ಕರ್ತವ್ಯದಲ್ಲಿ ನಿರತರಾಗಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ, ಪುರಸಭೆ, ನಗರಸಭೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು, ಆಶಾ ಕಾರ್ಯಕರ್ತರ ರಕ್ಷಣೆಯನ್ನು ನಮ್ಮ ರಾಜ್ಯ ಸರಕಾರ ಮಾಡಲಿದೆ. ಕೊರೋನಾ ವಾರಿಯರ್ಸ್ ನಡೆಸುತ್ತಿರುವ ಕಾರ್ಯ ಶ್ಲಾಘನೀಯವಾದದ್ದು, ಸರಕಾರ ಅವರ ಕಾರ್ಯವನ್ನು ಮೆಚ್ಚುತ್ತಿದ್ದು, ಇಂದು ರಾಜ್ಯದಲ್ಲಿ ಕೊರೋನಾ ನಿಯಂತ್ರಣದಲ್ಲಿದೆ ಎಂದರೆ ಅದಕ್ಕೆ ನಮ್ಮ ವೈದ್ಯಕೀಯ ರಂಗದ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ಈಗಾಗಲೇ ಕೇರಳ ಮತ್ತು ಉತ್ತರ ಪ್ರದೇಶ ಸರ್ಕಾರಗಳ ಕಠಿಣ ಕಾನೂನುಗಳ ಕ್ರಮದ ಕುರಿತು ಚರ್ಚೆ ನಡೆಸಿ ಸಚಿವ ಸಂಪುಟದಲ್ಲಿ ಚರ್ಚಿಸಿ ನೂತನ ಕಾನೂನನ್ನು ರಾಜ್ಯದಲ್ಲಿ ಸುಗ್ರೀವಾಜ್ಞೆ ಮೂಲಕ ತಂದಿದ್ದು ಅದಕ್ಕೆ ರಾಜ್ಯ ಪಾಲರು ಅಂಕಿತ ಸಹ ದೊರೆತಿದ್ದು ರಾಜ್ಯದಲ್ಲಿ ಸುಗ್ರಿವಾಜ್ಞೆ ಜಾರಿಯಲ್ಲಿದೆ. ಇನ್ನು ಮುಂದೆ ರಾಜ್ಯದಲ್ಲಿ ಕೊರೋನಾ ವಾರಿಯರ್ಸ್ ಮೇಲೆ ಯಾರೆ ಆದರೂ ಹಲ್ಲೆ, ಅವಾಚ್ಯ ಶಬ್ದಗಳಿಂದ ನಿಂದನೆ, ಹಾಗೂ ಆಶಾ ಕಾರ್ಯಕರ್ತರ ಹಾಗೂ ಕಾನೂನು ಪಾಲಕರ ಕರ್ತವ್ಯಕ್ಕೆ ಅಡ್ಡಿ ಮಾಡಿದರೆ ಅಂತಹವರ ಮೇಲೆ ಕಠಿಣ ಕ್ರಮ ಜರುಗಿಸುಲು ಕಾನೂನು ಬಲ ಸಿಕ್ಕಿದೆ. ಇನ್ನು ಬಾಲ ಬಿಚ್ಚಿದರೆ ಅವರಿಗೆ ನಾವು ಹೇಳುವದಿಲ್ಲಾ ಕಾನೂನು ಮಾತನಾಡುತ್ತದೆ ಎಂದು ಕಿಡಿಗೇಡಿಗಳಿಗೆ ಡಿಸಿಎಂ ಲಕ್ಷ್ಮಣ ಸವದಿ ನೇರವಾಗಿ ಎಚ್ಚರಿಕೆ ನೀಡಿದರು
Share
WhatsApp
Follow by Email