ಅವರಾದಿ ಗ್ರಾಮದಲ್ಲಿ ರೈತರಿಗೆ ಸಬ್ಸಿಡಿ ದರದಲ್ಲಿ ಬೀಜ- ಗೊಬ್ಬರ ಪೂರೈಕೆಗೆ ಕಿತ್ತೂರ ಮತಕ್ಷೇತ್ರದ ಶಾಸಕರಾದ ಮಹಾಂತೇಶ ದೊಡ್ಡಗೌಡರ ಚಾಲನೆ

ಅವರಾದಿ ಗ್ರಾಮದಲ್ಲಿ ರೈತರಿಗೆ ಸಬ್ಸಿಡಿ ದರದಲ್ಲಿ ಬೀಜ- ಗೊಬ್ಬರ ಪೂರೈಕೆಗೆ ಕಿತ್ತೂರ ಮತಕ್ಷೇತ್ರದ ಶಾಸಕರಾದ ಮಹಾಂತೇಶ ದೊಡ್ಡಗೌಡರ ಚಾಲನೆ

ಚನ್ನಮ್ಮನ ಕಿತ್ತೂರು : ಕೋವಿಡ್-19 ಕೊರೋನಾ ವೈರಸ್ ಬೆಂಬಿಡದೇ ಕಾಡುತ್ತಿರುವ ಸಂದರ್ಭದಲ್ಲಿಯೂ ರಾಜ್ಯ ಸರಕಾರ ಮುಂಗಾರು ಹಂಗಾಮಿಗಾಗಿ ರೈತರಿಗೆ ಸಬ್ಸಿಡಿ ದರದಲ್ಲಿ ಬೀಜ- ಗೊಬ್ಬರ ಪೂರೈಕೆಯನ್ನು ಆರಂಭಿಸಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕಿತ್ತೂರ ಮತಕ್ಷೇತ್ರದ ಶಾಸಕ ಮಹಾಂತೇಶ ದೊಡ್ಡಗೌಡರ ರೈತರಿಗೆ ಕರೆ ನೀಡಿದರು.
ಅವರು ಮತಕ್ಷೇತ್ರದ ಅವರಾದಿ ಗ್ರಾ.ಪಂ. ಗ್ರಂಥಾಲಯದಲ್ಲಿ ರೈತರಿಗೆ ಬೀಜ-ಗೊಬ್ಬರ ವಿತರಿಸಿ ಮಾತನಾಡಿ, ಮುಂದಿನ ತಿಂಗಳಿನಿAದ ರೈತರು ಮುಂಗಾರು ಹಂಗಾಮಿಗೆ ಬಿತ್ತನೆ ಆರಂಭಿಸಲಿದ್ದು, ಹೊಲ ಗದ್ದೆಗಳನ್ನು ಬಿತ್ತನೆಗೆ ಸಜ್ಜುಗೊಳಿಸುತ್ತಿದ್ದಾರೆ. ರಾಜ್ಯ ಸರಕಾರ ರೈತರಿಗೆ ಮುಂಗಾರು ಹಂಗಾಮಿಗೆ ಯಾವುದೇ ತೊಂದರೆಯಾಗಬಾರದೆoಬ ಉದ್ದೇಶದಿಂದ ಸಕಾಲಕ್ಕೆ ರೈತರಿಗೆ ಬೀಜ-ಗೊಬ್ಬರ ವಿತರಿಸುತ್ತಿದೆ ಎಂದು ಹೇಳಿದರು.
ಕಿತ್ತೂರು ಬಿಜೆಪಿ ಮಂಡಳ ಅಧ್ಯಕ್ಷ ಬಸವರಾಜ ಪರವಣ್ಣವರ ರೈತ ಸಂಪರ್ಕ ಕೇಂದ್ರ, ಕಿತ್ತೂರು ಹೋಬಳಿ ವ್ಯಾಪ್ತಿಯಲ್ಲಿ ಒಟ್ಟು 12 ಬೀಜ ವಿತರಣಾ ಕೇಂದ್ರಗಳನ್ನು ತೆರೆಯಲಾಗಿದ್ದು, ನಿಚ್ಚಣಕಿ, ಹಿರೇನಂದಿಹಳ್ಳಿ, ಅವರಾದಿ, ಕಲಭಾಂವಿ, ಖೊದಾನಪೂರ, ತುರಮರಿ, ಹುಣಶೀಕಟ್ಟಿ, ಕಾದ್ರೊಳ್ಳಿ, ಎಂ.ಕೆ.ಹುಬ್ಬಳ್ಳಿ, ಅಂಬಡಗಟ್ಟಿ ಮತ್ತು ದೇಗಾಂವ ಪ್ರಾಥಮಿಕ ಸಹಕಾರಿ ಸಂಘಗಳ ಮುಖಾಂತರ ರೈತರಿಗೆ ಸರಕಾರದ ರಿಯಾಯತಿ ದರದಲ್ಲಿ ಸೋಯಾಬಿನ್, ಗೋವಿನಜೋಳ ಮತ್ತು ಭತ್ತದ ಬೀಜಗಳನ್ನು ವಿತರಣೆಯನ್ನು ಪ್ರಾರಂಭಿಸಿದ್ದು, ರೈತರು ತಮ್ಮ ಆಧಾರ್ ಕಾರ್ಡ ಮತ್ತು ಖಾತೆ ಉತಾರ/ಪರ್ಮಿಟ್ ದಾಖಲೆಗಳನ್ನು ತೆಗೆದುಕೊಂಡು ಹತ್ತಿರದ ಬೀಜ ವಿತರಣಾ ಕೇಂದ್ರದಿAದ ಬೀಜ ಪಡೆಯುವಂತೆ ತಿಳಿಸಿದರು.
ಕೃಷಿ ಇಲಾಖೆ, ಗ್ರಾಮ ಪಂಚಾಯತಿ ಅಧಿಕಾರಿಗಳು ಸದಸ್ಯರು ಇದ್ದರು.
Share
WhatsApp
Follow by Email