ಸ್ಯಾಮ್ಸಂಗ್ ಅಮೆಜಾನ್ನೊಂದಿಗೆ ಸಹಬಾಗಿತ್ವವನ್ನು ಹೊಂದಿದೆ. ಅದರ ಮುಲಕ ವಿದ್ಯಾರ್ಥಿಗಳಿಗಾಗಿ ಗ್ಯಾಲಕ್ಸಿ ಟ್ಯಾಬ್ ಎ7 ವೈ-ಫೈ ಮತ್ತು ಗ್ಯಾಲಕ್ಸಿ ಟ್ಯಾಬ್ ಎಸ್6 ಲೈಟ್ ವೈ-ಫೈ ಮೇಲೆ 2 ಸಾವಿರ ಡಿಸ್ಕೌಂಟ್ ನೀಡಿದೆ. ಇದು ಅಮೆಜಾನ್ ಪ್ರೈಮ್ ಯಂಗ್ ಅಡಾಲ್ಟ್ ಕಾರ್ಯಕ್ರಮದ ಭಾಗವಾಗಿದೆ. ಇನ್ನು ಕೊಡುಗೆಗೆ ಅರ್ಹರಾಗಿರುವ ಗ್ರಾಹಕರು ತಮ್ಮ ಅಮೆಜಾನ್ ಖಾತೆಯಲ್ಲಿ ವಿಶೇಷ ಕೂಪನ್ ಅನ್ನು ಪಡೆಯುತ್ತಾರೆ.
ಜನಪ್ರಿಯ ಬ್ರಾಂಡ್ ಸ್ಯಾಮ್ಸಂಗ್ ವಿದ್ಯಾರ್ಥಿಗಳಿಗಾಗಿ ವಿಶೇಷ ರಿಯಾಯಿತಿಯೊಂದನ್ನು ತೆರೆದಿಟ್ಟಿದೆ. ‘ಬ್ಯಾಕ್ ಟು ಸ್ಕೂಲ್‘ ಹೆಸರಿನ ಮೂಲಕ ಸ್ಯಾಮ್ಸಂಗ್ ವಿಶೇಷ ರಿಯಾಯಿತಿ ನೀಡುತ್ತಿದ್ದು, ಅದರಲ್ಲಿ ಗ್ಯಾಲಕ್ಸಿ ಟ್ಯಾಬ್ ಎಸ್7+, ಗ್ಯಾಲಕ್ಸಿ ಟ್ಯಾಬ್ ಎಸ್7, ಗ್ಯಾಲಕ್ಸಿ ಟ್ಯಾಬ್ ಎಸ್6 ಮತ್ತು ಗ್ಯಾಲಕ್ಸಿ ಟ್ಯಾಬ್ ಎ7 ಅನ್ನು ಕಡಿಮೆ ಬೆಲೆಗೆ ಖರೀದಿಸುವ ಅವಕಾಶ ನೀಡಿದೆ.
ಸ್ಟೂಡೆಂಟ್ ಆಫರ್; ಆಫ್ಲೈನ್ ಮತ್ತು ಆನ್ಲೈನ್
ಸ್ಯಾಮ್ಸಂಗ್ ಸಂಸ್ಥೆ ವಿದ್ಯಾರ್ಥಿಗಳಿಗಾಗಿ ‘ಸ್ಟೂಡೆಂಟ್ ಅಡ್ವಾಂಟೇಜ್’ ಹೆಸರಿನಲ್ಲಿ ಆಫರ್ ನೀಡಿದೆ. ವಿದ್ಯಾರ್ಥಿಗಳು ಸ್ಮಾರ್ಟ್ ಕೆಫೆ ಮತ್ತು ಫ್ಲಾಜಾ ಸ್ಟೋರ್ಗಳಿಗೆ ಭೇಟಿ ನೀಡಿದಾಗ ಈ ಕೊಡುಗೆ ಪಡೆಯಲು ಅನುಮತಿಸುತ್ತದೆ. ಸಂಬಂಧಿಸಿದ ರಿಯಾಯಿತಿ ಪಡೆಯಲು ಕಾಲೇಜು ಐಡಿ ಡಿಸ್ಕೌಂಟ್ ಪಡೆಯಬಹುದಾದ ಅವಕಾಶ ನೀಡುತ್ತಿದೆ. ಅದರ ಜೊತೆಗೆ ಸ್ಮಾರ್ಟ್ಕ್ಲಬ್ ಮೆಂಬರ್ಶಿಪ್ ಕೂಡ ನೀಡುತ್ತಿದೆ. ಮಾತ್ರವಲ್ಲದೆ ರಿವಾರ್ಡ್ ಪಾಯಿಂಟ್ ನತ್ತು ಸರ್ವಿಸ್ ಬೆನಿಫಿಟ್ ಪಡೆಯಬಹುದಾಗಿ ತಿಳಿಸಿದೆ. ಗ್ಯಾಲಕ್ಸಿ ಟ್ಯಾಬ್ನಲ್ಲಿ ನಿಯಮಿತ ಗ್ರಾಹಕ ಕೊಡುಗೆಗಳ ಜೊತೆಗೆ ಈ ವಿಶೇಷ ಕೊಡುಗೆ ಸೇರಿದೆ.
ಸ್ಯಾಮ್ಸಂಗ್ ಅಮೆಜಾನ್ನೊಂದಿಗೆ ಸಹಬಾಗಿತ್ವವನ್ನು ಹೊಂದಿದೆ. ಅದರ ಮುಲಕ ವಿದ್ಯಾರ್ಥಿಗಳಿಗಾಗಿ ಗ್ಯಾಲಕ್ಸಿ ಟ್ಯಾಬ್ ಎ7 ವೈ-ಫೈ ಮತ್ತು ಗ್ಯಾಲಕ್ಸಿ ಟ್ಯಾಬ್ ಎಸ್6 ಲೈಟ್ ವೈ-ಫೈ ಮೇಲೆ 2 ಸಾವಿರ ಡಿಸ್ಕೌಂಟ್ ನೀಡಿದೆ. ಇದು ಅಮೆಜಾನ್ ಪ್ರೈಮ್ ಯಂಗ್ ಅಡಾಲ್ಟ್ ಕಾರ್ಯಕ್ರಮದ ಭಾಗವಾಗಿದೆ. ಇನ್ನು ಕೊಡುಗೆಗೆ ಅರ್ಹರಾಗಿರುವ ಗ್ರಾಹಕರು ತಮ್ಮ ಅಮೆಜಾನ್ ಖಾತೆಯಲ್ಲಿ ವಿಶೇಷ ಕೂಪನ್ ಅನ್ನು ಪಡೆಯುತ್ತಾರೆ.
ಫ್ಲಿಪ್ಕಾರ್ಟ್ ಕೂಡ ‘ಸ್ಮಾರ್ಟ್ ಅಪ್ಗ್ರೇಡ್ ಆನ್ ಟ್ಯಾಬ್ಲೆಟ್‘ ಕಾರ್ಯಕ್ರಮದ ಮೂಲಕ ಗ್ರಾಹಕರಿಗೆ ಹೊಸ ಸಾಧನವನ್ನು ಪಡೆಯಲು ಅವಕಾಶ ಮಾಡಿಕೊಡುತ್ತಿದೆ. ಗ್ಯಾಲಕ್ಸಿ ಟ್ಯಾಬ್ ಮೇಲೆ ಶೇ 70ರಷ್ಟು ಮಾತ್ರ ಪಾವತಿಸುವ ಅವಕಾಶ ನೀಡಿದೆ. ಗ್ರಾಹಕರು ಒಂದು ವರ್ಷದ ನಂತರ ಹೊಸ ಗ್ಯಾಲಕ್ಸಿ ಟ್ಯಾಬ್ ಖರೀದಿಸಬಹುದು ಮತ್ತು ಹಳೆಯ ಸಾಧನವನ್ನುಹಿಂತಿರುಗಿಸಬಹುದು. ಗ್ಯಾಲಕ್ಸಿ ಎಸ್21 ಸರಣಿ ಸೇರಿದಂತೆ ವಿವಿಧ ಸ್ಯಾಮ್ಸಂಗ್ ಸ್ಮಾರ್ಟ್ಫೋನ್ಗಳ ಮೇಲೆ ಈ ಕೊಡುಗೆ ಲಭ್ಯವಿದೆ.
ಸ್ಯಾಮ್ಸಂಗ್ ಟ್ಯಾಬ್ಲೆಟ್ಗಳ ಮೇಲೆ ರಿಯಾಯಿತಿ
ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ಯಾಬ್ ಎಸ್ 7 +, ಗ್ಯಾಲಕ್ಸಿ ಟ್ಯಾಬ್ ಎಸ್ 7, ಗ್ಯಾಲಕ್ಸಿ ಟ್ಯಾಬ್ ಎಸ್ 6 ಲೈಟ್ ಮತ್ತು ಗ್ಯಾಲಕ್ಸಿ ಟ್ಯಾಬ್ ಎ7 ಅನ್ನು ತನ್ನದೇ ಆದ ಇ-ಸ್ಟೋರ್ನಲ್ಲಿ ಖರೀದಿಸುವಾಗ ಅವಕಾಶವನ್ನು ನೀಡಿದೆ. ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಶೇಕಡಾ 10 ರಷ್ಟು ರಿಯಾಯಿತಿ ನೀಡುತ್ತಿದೆ. ದೇಶಾದ್ಯಂತದ ವಿದ್ಯಾರ್ಥಿಗಳು ತಮ್ಮ ಅಧಿಕೃತ ಕಾಲೇಜು / ಶಾಲೆ / ವಿಶ್ವವಿದ್ಯಾಲಯದ ಇಮೇಲ್ ಐಡಿ ಬಳಸಿ ಅಥವಾ ಅಧಿಕೃತ ವಿದ್ಯಾರ್ಥಿ ರುಜುವಾತು ಪರಿಶೀಲನಾ ಏಜೆನ್ಸಿಯ ಮೌಲ್ಯಮಾಪನದ ಮೂಲಕ ಈ ಪ್ರಯೋಜನಗಳನ್ನು ಪಡೆಯಬಹುದಾಗಿದೆ ಎಂದು ತಿಳಿಸಿದೆ.ಸ್ಯಾಮ್ಸಂಗ್ ತನ್ನ ಗ್ಯಾಲಕ್ಸಿ ಟ್ಯಾಬ್ ಎಸ್ 7 +, ಗ್ಯಾಲಕ್ಸಿ ಟ್ಯಾಬ್ ಎಸ್ 7 ಗಾಗಿ ಸ್ಯಾಮ್ಸಂಗ್ ಟ್ಯಾಬ್ಲೆಟ್ ಕೀಬೋರ್ಡ್ಗಳ ಮೇಲೆ 10,000 ರೂ. ರಿಯಾಯಿತಿ ನೀಡುತ್ತದೆ. ಟ್ಯಾಬ್ ಎಸ್ 7 + ಕೀಬೋರ್ಡ್ ಕವರ್ಗೆ 7,999 ರೂ. ಮತ್ತು ಟ್ಯಾಬ್ ಎಸ್ 7 ಗೆ 5,999 ರೂ. ಎಚ್ಡಿಎಫ್ಸಿ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಕೆದಾರರು ಗ್ಯಾಲಕ್ಸಿ ಟ್ಯಾಬ್ ಎಸ್ 7 + ನಲ್ಲಿ 10,000 ರೂ. ಮತ್ತು ಗ್ಯಾಲಕ್ಸಿ ಟ್ಯಾಬ್ ಎಸ್ 7 ನಲ್ಲಿ 9,000 ರೂ.ಗೆ ಖರೀದಿಸಬಹುದಾಗಿದೆ.
ಗ್ಯಾಲಕ್ಸಿ ಟ್ಯಾಬ್ ಎಸ್ 6 ಲೈಟ್ ಗ್ಯಾಲಕ್ಸಿ ಬಡ್ಸ್ + ನೊಂದಿಗೆ 1,999 ರೂಗಳ ವಿಶೇಷ ಬೆಲೆಗೆ ಮಾರಾಟ ಮಾಡುತ್ತಿದೆ. ಎಚ್ಡಿಎಫ್ಸಿ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಕೆದಾರರು 3000 ರೂ.ಗಳ ಹೆಚ್ಚುವರಿ ಹಣವನ್ನು ಪಡೆಯಲಿದ್ದಾರೆ. ನೀವು ಗ್ಯಾಲಕ್ಸಿ ಟ್ಯಾಬ್ ಎ 7 ಅನ್ನು ಖರೀದಿಸಲು ಬಯಸಿದರೆ, ಸ್ಯಾಮ್ಸಂಗ್ ಬ್ರಾಂಡ್ ಕವರ್ ಅನ್ನು 999 ರೂ.ಗಳ ರಿಯಾಯಿತಿ ದರದಲ್ಲಿ ಪಡೆಯುವ ಅವಕಾಶವನ್ನು ಸ್ಯಾಮ್ಸಂಗ್ ಮಾಡಿದೆ.