ಭೀಕರ ರಸ್ತೆ ಅಪಘಾತ : ಪ್ರಜಾವಾಣಿ ಪತ್ರಕರ್ತ ನಂದಿಕೋಲಮಠ, ಜಂಗಮಮೂರ್ತಿ ಸ್ಥಳದಲ್ಲೇ ಸಾವು!

ಮಹಬೂಬ್ ನಗರ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತಮಹಬೂಬ್ ನಗರ ಜಿಲ್ಲೆಯ ದೇವರಕದ್ರ ಮಂಡಲದ ಗೋಪಾಲಾಪುರಂ ಬಳಿ ಮಹಬೂಬ್ ನಗರ-ರಾಯಚೂರು 167ನೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ನಡೆದಿದೆ. ಎರ್ಟಿಗಾ ಕಾರು ಮತ್ತು ಟಿಪ್ಪ‌ರ್ ನಡುವೆ ಸಂಭವಿಸಿದ ಡಿಕ್ಕಿಯಿಂದ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮತ್ತೋರ್ವ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಮಹೇಬೂಬು ನಗರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ಈ ಘಟನೆಯಲ್ಲಿ ಕರ್ನಾಟಕದ ಲಿಂಗಸೂಗೂರು ನಿವಾಸಿಗಳಾದ ಆರು ಮಂದಿ ಕೊಲನಪಾಕಕ್ಕೆ ತೆರಳಿ ಹಿಂದಿರುಗುವ ಮಾರ್ಗದಲ್ಲಿ ಸಂಭವಿಸಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಎರ್ಟಿಗಾ ಕಾರು ಡ್ರೈವರ್‌ನ ಅತಿವೇಗ ಮತ್ತು ಅಜಾಗ್ರತೆಯೇ ಈ ಅಪಘಾತಕ್ಕೆ ಕಾರಣ ಎಂದು ಪೊಲೀಸರು ಹೇಳಿದ್ದಾರೆ.

ಈ ಅಪಘಾತದಲ್ಲಿ ಜಂಗಮಮೂರ್ತಿ ಮತ್ತು ಪ್ರಜಾವಾಣಿ ಪತ್ರಿಕೆಯ ವರದಿಗಾರರಾದ ಬಸವರಾಜ್ ನಂದಿಕೋಲಮಠ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಚಿನ್ನಯ್ಯ ತಾತ, ಮಲ್ಲಿಕಾರ್ಜುನ್, ಭಗವಾನ್, ಅಮರೇಶ್ ಮತ್ತು ಮಲ್ಲಣ್ಣ ಅವರಿಗೆ ಗಂಭೀರ ಗಾಯಗಳಾಗಿವೆ. ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ಮಕ್ಕಳಲ್ಲಿ 7 ಎಚ್ಎಂಪಿವಿ ಪ್ರಕರಣಗಳು ಪತ್ತೆ, ಬೆಂಗಳೂರಿನಲ್ಲಿ 2 ಪ್ರಕರಣಗಳು ಪತ್ತೆ

ಬೆಂಗಳೂರು : ಭಾರತದಲ್ಲಿ ಸೋಮವಾರ ಮಕ್ಕಳಲ್ಲಿ ಹ್ಯೂಮನ್ ಮೆಟಾಪ್ನ್ಯುಮೋವೈರಸ್ (ಎಚ್ಎಂಪಿವಿ) ಸೋಂಕಿನ ಏಳು ಪ್ರಕರಣಗಳು ವರದಿಯಾಗಿವೆ – ಬೆಂಗಳೂರು , ನಾಗ್ಪುರ ಮತ್ತು ತಮಿಳುನಾಡಿನಲ್ಲಿ ತಲಾ ಎರಡು ಮತ್ತು ಅಹಮದಾಬಾದ್ನಲ್ಲಿ ಒಂದು – ಚೀನಾದಲ್ಲಿ ಉಸಿರಾಟದ ಕಾಯಿಲೆಗಳು ಹೆಚ್ಚುತ್ತಿರುವ ಮಧ್ಯೆ ಆತಂಕಕ್ಕೆ ಕಾರಣವಾಗಿದೆ. ಆದಾಗ್ಯೂ, ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರು ಪರಿಸ್ಥಿತಿಯು ಕೋವಿಡ್ಗೆ ಹೋಲುವ ಮತ್ತೊಂದು ಏಕಾಏಕಿ ಪ್ರಾರಂಭವಾಗುವುದನ್ನು ಸೂಚಿಸುವುದಿಲ್ಲ ಎಂದು ಭರವಸೆ ನೀಡಿದರು.

“ಎಚ್ಎಂಪಿವಿ” ಹೊಸ ವೈರಸ್ ಅಲ್ಲ. ಇದನ್ನು ಮೊದಲು 2001 ರಲ್ಲಿ ಗುರುತಿಸಲಾಯಿತು, ಮತ್ತು ಇದು ಅನೇಕ ವರ್ಷಗಳಿಂದ ಇಡೀ ಜಗತ್ತಿನಲ್ಲಿ ಪ್ರಸಾರವಾಗುತ್ತಿದೆ” ಎಂದು ನಡ್ಡಾ ಹೇಳಿದರು.

ಜ್ವರಕ್ಕೆ ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 3 ತಿಂಗಳ ಮತ್ತು 8 ತಿಂಗಳ ಮಗು ಕೊರೊನಾ ಸೋಂಕಿಗೆ ತುತ್ತಾಗಿ ನಂತರ ಬ್ರಾಂಕೋಪ್ನ್ಯುಮೋನಿಯಾಕ್ಕೆ ತುತ್ತಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, “ಎಚ್ಎಂಪಿವಿ ಬಹಳ ಹಿಂದಿನಿಂದಲೂ ಅಸ್ತಿತ್ವದಲ್ಲಿದೆ ಮತ್ತು ಸಾಮಾನ್ಯವಾಗಿ ಶೀತ, ಜ್ವರ ಮತ್ತು ಕೆಮ್ಮಿನಂತಹ ಸಾಮಾನ್ಯ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ. ಇತ್ತೀಚಿನ ಯಾವುದೇ ಪ್ರಕರಣವನ್ನು ‘ಮೊದಲನೆಯದು’ ಎಂದು ಉಲ್ಲೇಖಿಸುವುದು ತಪ್ಪುದಾರಿಗೆಳೆಯುತ್ತದೆ. ನಾವು ಪ್ಯಾನಿಕ್ ಬಟನ್ ಒತ್ತಬೇಕು ಎಂದು ನಾನು ಭಾವಿಸುವುದಿಲ್ಲ.

ಮಕ್ಕಳು ಮತ್ತು ವೃದ್ಧರು ವಿಶೇಷವಾಗಿ ವೈರಸ್ಗೆ ಒಳಗಾಗುತ್ತಾರೆ ಎಂದು ಅವರು ಒತ್ತಿಹೇಳಿದರು ಮತ್ತು ಭಾರತದಲ್ಲಿ ಇತ್ತೀಚಿನ ಪ್ರಕರಣಗಳು ಸ್ಥಳೀಯ ತಳಿಯಿಂದ ಉಂಟಾಗಿರಬಹುದು ಮತ್ತು ಚೀನಾದಲ್ಲಿ ಏಕಾಏಕಿ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು. ಕಲ್ಯಾಣ್ ನಗರದ ಮೂರು ತಿಂಗಳ ಮಗುವನ್ನು ಡಿಸೆಂಬರ್ನಲ್ಲಿ ಜ್ವರ ಮತ್ತು ಶೀತದಿಂದ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಯ ಸಮಯದಲ್ಲಿ ನಡೆಸಿದ ಪರೀಕ್ಷೆಗಳು ಎಚ್ಎಂಪಿವಿ ಇರುವಿಕೆಯನ್ನು ಬಹಿರಂಗಪಡಿಸಿದವು. ನಂತರ ಮಗು ಚೇತರಿಸಿಕೊಂಡು ಡಿಸ್ಚಾರ್ಜ್ ಆಗಿದೆ.

ಬೆಂಗಳೂರು ಕಲಾ ಉತ್ಸವವಾದ ಚಿತ್ರ ಸಂತೆಗೆ ದೇಶಾದ್ಯಂತದ ಕಲಾ ಉತ್ಸಾಹಿಗಳು ಜಮಾ!

ಬೆಂಗಳೂರು: ನಗರದ ಕಲಾ ಉತ್ಸವವಾದ ಚಿತ್ರ ಸಂತೆಗೆ ದೇಶಾದ್ಯಂತದ ಕಲಾ ಉತ್ಸಾಹಿಗಳು ಜಮಾ, ಇದು ತನ್ನ ವೈವಿಧ್ಯಮಯ ಪ್ರದರ್ಶನದಿಂದ ಸಾವಿರಾರು ಸಂದರ್ಶಕರನ್ನು ಆಕರ್ಷಿಸಿತು. ‘ಆರ್ಟ್ ಫಾರ್ ಆಲ್’ ಪರಿಕಲ್ಪನೆಯು ದೇಶಾದ್ಯಂತದ ಕಲಾವಿದರು ಮತ್ತು ಕುಶಲಕರ್ಮಿಗಳಿಗೆ ಪ್ರಮುಖ ಆಕರ್ಷಣೆಯಾಗಿತ್ತು.

ಈಗ ಅದರ 22 ನೇ ಆವೃತ್ತಿಯಲ್ಲಿರುವ ವಾರ್ಷಿಕ ಕಲಾ ಮೇಳವು ಕರ್ನಾಟಕ ಚಿತ್ರಕಲಾ ಪರಿಷತ್ತಿಗೆ 5 ಲಕ್ಷಕ್ಕೂ ಹೆಚ್ಚು ಸಂದರ್ಶಕರನ್ನು ಆಕರ್ಷಿಸಿದೆ ಎಂದು ಹೇಳಲಾಗುತ್ತದೆ.


ಈ ವರ್ಷದ ಥೀಮ್ ದಿ ಗರ್ಲ್ ಚೈಲ್ಡ್, ಮಹಿಳೆಯರು ಮತ್ತು ಬಾಲಕಿಯರ ಮೇಲಿನ ದೌರ್ಜನ್ಯದ ವಿರುದ್ಧ ಒಗ್ಗಟ್ಟಿನಿಂದ ನಿಲ್ಲುವ ಅಗತ್ಯವನ್ನು ಎತ್ತಿ ತೋರಿಸುವ ಗುರಿಯನ್ನು ಹೊಂದಿದೆ.
ದೇಶಾದ್ಯಂತದ ಕಲಾವಿದರು ಸಮಕಾಲೀನ ಮತ್ತು ಆಧುನಿಕದಿಂದ ಹಿಡಿದು ಸ್ಥಳೀಯ, ಪ್ರಕೃತಿ ಪ್ರೇರಿತ, ವಾಸ್ತುಶಿಲ್ಪ ಮತ್ತು ಅಮೂರ್ತದವರೆಗೆ ವಿವಿಧ ರೀತಿಯ ಕೃತಿಗಳನ್ನು ಉತ್ಸವದಲ್ಲಿ ಪ್ರದರ್ಶಿಸಿದರು, ಇದು ಎಲ್ಲಾ ವಯಸ್ಸಿನ ಸಂದರ್ಶಕರನ್ನು ಸೆಳೆಯಿತು.

ಬಸ್ ಪ್ರಯಾಣ ದರವನ್ನು ಖಂಡಿಸಿ ಬೀದರ್ ನಲ್ಲಿ ಪ್ರತಿಭಟನೆ!

ಬೀದರ್ : ಪ್ರಯಾಣ ದರವನ್ನು ಶೇಕಡಾ.15 ರಷ್ಟು ಹೆಚ್ಚಳ ಮಾಡಿದ ಸರ್ಕಾರದ ನಿರ್ಧಾರವನ್ನು ಖಂಡಿಸಿ ದಿನಾಂಕ:06-01-2025 ರಂದು ಬೀದರ ನಗರದಲ್ಲಿ ಕೇಂದ್ರ ಬಸ್ಸ್ ನಿಲ್ದಾಣ ಮುಂದೆ ಪ್ರತಿಭಟನೆ ಮಾಡಲಾಯಿತು.ಕರ್ನಾಟಕ ರಾಜ್ಯ ಸರ್ಕಾರ ಬಸ್ ಪ್ರಯಾಣ ದರವನ್ನು 15% ರಷ್ಟು ಹೆಚ್ಚಳ ಮಾಡುವುದರ ಮೂಲಕ ಬಡ, ಕೂಲಿ ಕಾರ್ಮಿಕರು, ಮಧ್ಯಮವರ್ಗದ ಜನತೆಗೆ ಹೊರೆಯನ್ನ ಹೇರಿದಂತಾಗಿದೆ.

ಸರ್ಕಾರಿ ಬಸ್‌ಗಳನ್ನೇ ಅವಲಂಬಿಸಿ ಸಾವಿರಾರು ಜನ ದಿನನಿತ್ಯ ತಮ್ಮ ಕೆಲಸ ಕಾರ್ಯಗಳಿಗೆ ಓಡಾಡುತ್ತಾರೆ. ಆದರೆ ಶೇಕಡಾ.15 ರಷ್ಟು ಬಸ್ ಪ್ರಯಾಣದರ ಹೆಚ್ಚಳ ಮಾಡುವುದರ ಮೂಲಕ ಆರ್ಥಿಕ ಹೊರೆಯನ್ನು ಜನಸಾಮಾನ್ಯರ ಮೇಲೆ ರಾಜ್ಯ ಸರ್ಕಾರ ಹಾಕುತ್ತಿದೆ.ಬಸ್‌ಗಳ ಸಂಖ್ಯೆ ಹೆಚ್ಚಿಸಿ – ಪ್ರಯಾಣ ದರವನಲ್ಲ.ಶಕ್ತಿ ಯೋಜನೆಯಿಂದಾಗಿ ದಿನನಿತ್ಯ ಬಸ್ಸಿನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವುದು ಸರ್ಕಾರದ ಗಮನಕ್ಕೆ ಇದೆ, ಆದರೆ ಬಸ್ಗಳ ಸಂಖ್ಯೆಯನ್ನು ಹೆಚ್ಚಳ ಮಾಡದೆ ದಿನನಿತ್ಯ ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ತೊಂದರೆಯನ್ನುಂಟು ಮಾಡುತ್ತಿದೆ ವಿದ್ಯಾರ್ಥಿಗಳ ಶಾಲಾ- ಕಾಲೇಜಿಗೆ ಹೋಗುವ ಸಂದರ್ಭದಲ್ಲಿ ಹಲವಾರು ಬಸ್ಸುಗಳಲ್ಲಿ ಸ್ಥಳಾವಕಾಶ ಇಲ್ಲದೆ ಬಸ್ಗಳನ್ನ ನಿಲ್ಲಿಸಿದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದರಿಂದ ಸರಿಯಾದ ಸಮಯಕ್ಕೆ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲು ಆಗುತ್ತಿಲ್ಲ.

ಸರ್ಕಾರ ಕೂಡಲೇ ಬಸ್ಗಳ ಸಂಖ್ಯೆಯನ್ನು ಹೆಚ್ಚಳ ಮಾಡಿ ವಿದ್ಯಾರ್ಥಿಗಳ ಹಾಗೂ ಜನಸಾಮಾನ್ಯರ ಪ್ರಯಾಣಕ್ಕೆ ಅನುಕೂಲ ಮಾಡಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೀದರ ನಗರದ ವತಿಯಿಂದ ಮಾನ್ಯ ವಿಭಾಗ ನಿಯಂತ್ರಣ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು. ಈ ಸಮಯದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ನಗರ ಕಾರ್ಯದರ್ಶಿ ಆನಂದ, ಸಹ ಕಾರ್ಯದರ್ಶಿ ನಾಗರಾಜ, ಪವನ್ ಕುಂಬಾರ ಲಿಂಗದೇವ ಗುತ್ತಿ,ಪ್ರಾರ್ಥನ, ಕಾವೇರಿ, ಸೋನಾಲ್ , ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

HMPV ಸೋಂಕಿನ ಕುರಿತು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾರ್ಗಸೂಚಿ ಹೊರಡಿಸಿದೆ.

HMPV Virus

ಬೆಂಗಳೂರು:ಇತ್ತೀಚಿಗೆ ಚೀನಾ ದೇಶದಲ್ಲಿ ಹರಡಿರುವ HMPV ಸೋಂಕಿನ ಕುರಿತು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾರ್ಗಸೂಚಿ ಹೊರಡಿಸಿದೆ. ರಾಜ್ಯದಲ್ಲಿ ಎಚ್​​ಎಂಪಿವಿ ಕುರಿತು ಆತಂಕಪಡುವ ಅಗತ್ಯವಿಲ್ಲ. ಕೇಂದ್ರ ಸರ್ಕಾರ, ಎನ್​ಸಿಡಿಸಿ ಜೊತೆ ಪರಿಸ್ಥಿತಿಯ ಸೂಕ್ಷ್ಮ ಮೇಲ್ವಿಚಾರಣೆ ನಡೆಸುತ್ತಿದೆ.

ಚಳಿಗಾಲದ ಇತರೆ ಶ್ವಾಸಕೋಶ ಸೋಂಕಿನ ರೀತಿಯಲ್ಲಿಯೇ ಶೀತ ಮತ್ತು ಜ್ವರದ ಲಕ್ಷಣವನ್ನು ಎಚ್​ಎಂಪಿವಿ ವ್ಯಕ್ತಪಡಿಸುತ್ತದೆ ಎಂದು ತಿಳಿಸಿದೆ.

Press note Released by Department of Health and Family Welfare Services

ಏನೇನು ಮಾಡಬೇಕು?

  1. ಕೆಮ್ಮುವಾಗ ಸೀನುವಾಗ ಕಾರವಸ್ತ್ರದಿಂದ ಬಾಯಿಯನ್ನು ಮುಚ್ಚಿಕೊಳ್ಳಿ
  2. ಆಗಾಗ ಕೈಯನ್ನು ಸಾನಿಟೈಜರ್ ಅಥವಾ ಸೋಪಿನಿಂದ ತೊಳೆಯುತ್ತಿರಿ
  3. ನಿಮಗೆ ಕೆಮ್ಮು , ಶೀತ, ಜ್ವರ ಇದ್ದರೆ ಜನ ಪ್ರದೇಶದಿಂದ ದೂರವಿರಿ.
  4. ಮನೆಯಲ್ಲಿಯೇ ಇರಿ.
  5. ಸರಿಯಾದ ಪ್ರಮಾಣದ ನೀರು ಮತ್ತು ಪ್ರೋಟಿನ್ ಯುಕ್ತ ಆಹಾರ ಸೇವಿಸಿ.

ಗುತ್ತೇದಾರ ಸಚಿನ್ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ಗೆ ಒದಗಿದ ಸಂಕಷ್ಟ

ಗುತ್ತಿಗೆದಾರ ಸಚಿನ್​​ ಪ್ರಕರಣ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಸಚಿನ್​ ಬರೆದಿಟ್ಟ ನೋಟ್​ ಬಿಜೆಪಿ ಪಾಲಿಗೆ ಬ್ರಹ್ಮಾಸ್ತ್ರವಾಗಿದೆ. ಸಚಿವ ಪ್ರಿಯಾಂಕ್​ ಖರ್ಗೆ ರಾಜೀನಾಮೆಗೆ ಬಿಜೆಪಿ ಪಟ್ಟು ಹಿಡಿದಿದೆ. ಈಶ್ವರಪ್ಪ ರಾಜೀನಾಮೆಯನ್ನೇ ಮುಂದಿಟ್ಟು ದಾಳ ಉರುಳಿಸಿದೆ.

ಪ್ರಕರಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್​ ಕೋಟೆಯಿಂದ ಆರೋಪ-ಪ್ರತ್ಯಾರೋಪಗಳ ಸಿಡಿಗುಂಡು ಸಿಡಿಯುತ್ತಿವೆ. ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರು ಹೆಸರನ್ನು ಉಲ್ಲೇಖಿಸಿದ್ದೇ ಬಿಜೆಪಿ ಪಾಲಿಗೆ ಬ್ರಹ್ಮಾಸ್ತ್ರವಾಗಿದೆ. ಇದೇ ವಿಚಾರವನ್ನೇ ಹಿಡಿದು ಬಿಜೆಪಿ, ಸಚಿವ ಪ್ರಿಯಾಂಕ್​ ಖರ್ಗೆ ರಾಜೀನಾಮೆಗೆ ಬಿಗಿಪಟ್ಟು ಹಿಡಿದಿದೆ.

ಈಶ್ವರಪ್ಪ ವಿಚಾರದಲ್ಲಿ ಪ್ರಿಯಾಂಕ್ ಖರ್ಗೆ ಏನು ಹೇಳಿದ್ರು?

ಸಚಿವ ಪ್ರಿಯಾಂಕ್​ ಖರ್ಗೆ ರಾಜೀನಾಮೆ ಬಗ್ಗೆ ಮಾತನಾಡಿದ ಬಿಜೆಪಿ ಎಂಎಲ್​ಸಿ ಸಿ.ಟಿ ರವಿ, ಈಶ್ವರಪ್ಪ ರಾಜೀನಾಮೆ ಪ್ರಸಂಗ ಹಿಡಿದು ಕುಟುಕಿದ್ದಾರೆ. ಈಶ್ವರಪ್ಪ ವಿಚಾರದಲ್ಲಿ ಪ್ರಿಯಾಂಕ್ ಖರ್ಗೆ ಏನು ಹೇಳಿದ್ರು ಅಂತ ನೆನಪಿಸಿಕೊಳ್ಳಲಿ. ಪ್ರಿಯಾಂಕ್ ಖರ್ಗೆಯವರೇ ಹೊಣೆ ಆಗಬೇಕು ಎಂದು ಸಿಟಿ ರವಿ ಗುಡುಗಿದ್ದಾರೆ.

ಎವಿಡೆನ್ಸ್ ಇಲ್ಲ, ಸಾಕ್ಷಿ ಇಲ್ಲ ಅಂತ CM ಕೌಂಟರ್!​

ಸಚಿವ ಪ್ರಿಯಾಂಕ್​ ಖರ್ಗೆ ರಾಜೀನಾಮೆಗೆ ಪಟ್ಟು ಹಿಡಿದಿರೋ ಬಿಜೆಪಿ ವಿರುದ್ದ ಸಿಎಂ ಸಿದ್ದರಾಮಯ್ಯ ಕೆಂಡ ಉಗುಳಿದ್ದ್ದಾರೆ. ಪ್ರಿಯಾಂಕ್​ ರಾಜೀನಾಮೆ ಪಡೆಯಲು ಏನಾದ್ರು ಎವಿಡೆನ್ಸ್ ಇರಬೇಕಲ್ವಾ? ಏನು ಎವಿಡೆನ್ಸ್ ಇಲ್ಲ, ಸಾಕ್ಷಿ ಇಲ್ಲ ಅಂತ ಪರೋಕ್ಷವಾಗೆ ರಾಜೀನಾಮೆ ಪಡೆಯೋ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಇದು ಬಿಜೆಪಿ ರಾಜಕೀಯ ದ್ವೇಷದಿಂದ ಮಾಡ್ತಿರೋ ಆರೋಪ ಎಂದು ಕಿಡಿಕಾರಿದ್ದಾರೆ.

ಸಚಿನ್ ಗುತ್ತಿಗೆದಾರನೇ ಅಲ್ಲ ಎಂದ ಗುತ್ತಿಗೆದಾರ ಸಂಘ

ಸಚಿನ್​ ಗುತ್ತಿಗೆದಾರನೇ ಅಲ್ಲ ಎಂದು ಬೀದರ್​ ಗುತ್ತಿಗೆದಾರರ ಸಂಘ ವರದಿ ನೀಡಿತ್ತು. ಗುತ್ತಿಗೆದಾರರ ಸಂಘದ ವರದಿ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿನ್ ಸಹೋದರಿ ಸುರೇಖಾ ಪ್ರತಿಕ್ರಿಯೆ ನೀಡಿದ್ದಾರೆ. ಸಚಿನ್ ಗುತ್ತಿಗೆದಾರ ಅಂತಾ ನಾವು ಯಾವತ್ತು ಹೇಳಿಕೊಂಡಿಲ್ಲ, ಸಂಘದವರೇ ಬಂದು ಅವನ ಹತ್ರ ಲೈಸೆನ್ಸ್ ಇದೆಯಾ ಎಂದು ಕೇಳಿದ್ರು. ಲೈಸೆನ್ಸ್ ಇರುವ ಬಗ್ಗೆ ನಮಗೆ ಗೊತ್ತಿಲ್ಲ, ಎಲ್ಲಾ ಡಾಕ್ಯುಮೆಂಟ್ಸ್ ಕಲಬುರಗಿ ಆಫೀಸ್‌ನಲ್ಲಿದ್ದವು. ಈಗಾಗಲೇ ಕಲಬುರಗಿ ಕಚೇರಿಯಲ್ಲಿ ಎಲ್ಲಾ ದಾಖಲೆಗಳು ನಾಶ ಮಾಡಿದ್ದಾರೆ ಎಂದು ಆರೋಪಿಸಿದ್ರು.
ಒಟ್ನಲ್ಲಿ ಯುವ ಗುತ್ತಿಗೆದಾರ ಸಚಿನ್ ಪ್ರಕರಣ ಸದ್ಯ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡೋ ಹಂತಕ್ಕೆ ಬಂದು ತಲುಪಿದೆ. ಈ ಪ್ರಕರಣ ಅದ್ಯಾವ ಘಟ್ಟಕ್ಕೆ ಹೋಗುತ್ತೆ ಎಂದು ಕಾದುನೋಡಬೇಕಿದೆ.

KSRTC ಟಿಕೇಟ್ ದರ ಹೆಚ್ಚಳ ; ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸುದ್ದಿಗೋಷ್ಠಿ !

ಜನವರಿ 5, ಭಾನುವಾರ ಬೆಳಗ್ಗೆಯಿಂದಲೇ KSRTC ಟಿಕೆಟ್ ದರ ಹೆಚ್ಚಳ ರಾಜ್ಯಾದ್ಯಂತ ಜಾರಿಯಾಗಿದೆ. ಸುದ್ದಿಗೋಷ್ಠಿ ನಡೆಸಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ.

Karnataka Transport Minister Ramalinga Reddy

ರಾಜ್ಯ ಸರ್ಕಾರಕ್ಕೆ ಸಾರಿಗೆ ಬಸ್ ಟಿಕೆಟ್ ದರ ಏರಿಕೆ ಮಾಡೋಕೆ ಇಷ್ಟ ಇರಲಿಲ್ಲ. ಪ್ರತಿನಿತ್ಯ ವೆಚ್ಚ ಜಾಸ್ತಿ ಆಗುತ್ತಾ ಇತ್ತು. ಇಷ್ಟ ಕಷ್ಟದಲ್ಲಿ ಹೊಸ ಬಸ್ ಕೊಟ್ಟಿದ್ದೀವಿ. 1000 ನೇಮಕಾತಿ ಮಾಡಿದ್ದೀವಿ. ಹೊಸ ನಿಯಮಗಳನ್ನು ಆರೋಗ್ಯ ವಿಮೆ ಮಾಡುತ್ತಾ ಇದ್ದೀವಿ ಎಂದರು.

ಬಿಜೆಪಿಯವರು ಸಾಲ ಮಾಡಿ ಬಿಟ್ಟು ಹೋಗಿದ್ದರು. ಬಿಜೆಪಿ ಮಹಿಳಾ ವಿರೋಧಿಗಳು. ಶಕ್ತಿ ಯೋಜನೆ ನಿಲ್ಲಿಸಬೇಕು ಅಂತ ಅಪಪ್ರಚಾರ ಮಾಡುತ್ತಾ ಇದ್ದಾರೆ. ನಾವು 2028ರಲ್ಲಿ ಮತ್ತೆ ನಮ್ಮ ಸರ್ಕಾರ ಬರುತ್ತೆ. 2030ರವರೆಗೆ ಗ್ಯಾರಂಟಿ ಯೋಜನೆಗಳು ಮುಂದುವರೆಯುತ್ತೆ ಎಂದಿದ್ದಾರೆ.

ನಾಳೆ ಸಾರಿಗೆ ಇಲಾಖೆ ಅಧಿಕೃತವಾಗಿ ದರ ಏರಿಕೆ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ಸಾಮಾನ್ಯ ಬಸ್ ನ ಸದ್ಯದ ಟಿಕೆಟ್ ದರ ಮತ್ತು 15% ರಷ್ಟು ಹೆಚ್ಚಳ ನಂತರದ ದರ ಎಷ್ಟಾಗಬಹುದು ಅನ್ನೋದು ಅಂದಾಜು ಪಟ್ಟಿ ಇಲ್ಲಿದೆ.

ಬಸ್ ಪ್ರಯಾಣ ದರ ಎಲ್ಲಿಗೆ ಎಷ್ಟು ಹೆಚ್ಚಳ ? ಮಾಹಿತಿ ಇಲ್ಲಿದೆ ;

ಬೆಂಗಳೂರು To ಮೈಸೂರು
146 ರೂಪಾಯಿ ದರ ಹೆಚ್ಚಳದ ನಂತರ – ಅಂದಾಜು 168 ರೂಪಾಯಿ

ಬೆಂಗಳೂರು To ಮಂಗಳೂರು
400 ರೂಪಾಯಿ ಹೆಚ್ಚಳದ ನಂತರದ ದರ – ಅಂದಾಜು 460 ರೂಪಾಯಿ

ಬೆಂಗಳೂರು To ಧರ್ಮಸ್ಥಳ
342 ರೂಪಾಯಿ ಹೆಚ್ವಳದ ನಂತರದ ದರ – ಅಂದಾಜು 393 ರೂಪಾಯಿ

ಬೆಂಗಳೂರು To ತುಮಕೂರು
80 ರೂಪಾಯಿ ಹೆಚ್ಚಳದ ನಂತರ – 92 ರೂಪಾಯಿ

ಬೆಂಗಳೂರು To ಚಿಕ್ಕಬಳ್ಳಾಪುರ
72 ರೂಪಾಯಿ ಹೆಚ್ಚಳದ ನಂತರ – ಅಂದಾಜು 83 ರೂಪಾಯಿ

ಬೆಂಗಳೂರು To ಚಿಕ್ಕಮಗಳೂರು
285 ರೂಪಾಯಿ ದರ ಏರಿಕೆ ನಂತರದ ದರ-328 ರೂಪಾಯಿ

ಬೆಂಗಳೂರು To ಹಾಸನ
246 ರೂಪಾಯಿ ಹೆಚ್ಚಳದ ನಂತರ – ಅಂದಾಜು 283 ರೂಪಾಯಿ

ಬೆಂಗಳೂರು To ರಾಯಚೂರು
556 ರೂಪಾಯಿ ಹೆಚ್ಚಳದ ನಂತರದ ದರ- 640 ರೂಪಾಯಿ

ಬೆಂಗಳೂರು To ಬಳ್ಳಾರಿ
376 ರೂಪಾಯಿ ಹೆಚ್ಚಳದ ನಂತರ – ಅಂದಾಜು 433 ರೂಪಾಯಿ

ಅನಧಿಕೃತ ಕಿಂಗ್ಸ್ ಕಾಫಿ ಕೋ. ಮೈಸೂರು ಮಹಾನಗರ ಪಾಲಿಕೆಯಿಂದ ದೃಢ!!

kings coffee co.

ಮೈಸೂರು: ಇತ್ತೀಚೆಗೆ ನಗರದಲ್ಲಿ ಎಲ್ಲೆಂದರಲ್ಲಿ ಉದ್ಯಮಗಳು ಅವ್ಯಾಹತವಾಗಿ ಅನಧಿಕೃತವಾಗಿ ತಲೆಎತ್ತುತ್ತಿದ್ದು ಪಾಲಿಕೆಗೆ ಮಾಹಿತಿ ನೀಡದೆ ಮನಬಂದಂತೆ ಕಮರ್ಷಿಯಲ್ ಆಫೀಸು, ವಾಣಿಜ್ಯ ಉದ್ಯಮ ಮಳಿಗೆಗಳು, ಶಾಪ್ ಗಳು ತಲೆ ಎತ್ತಿರುವುದು ಇಲ್ಲೊಂದು ಉತ್ತಮ ನಿದರ್ಶನವೆಂಬಂತೆ ರಾಮಕೃಷ್ಣ ನಗರದ ಬಳಿ ದಟ್ಟಗಳ್ಳಿ ರಸ್ತೆಗೆ ಹೊಂದಿಕೊಂಡು ಕೆ.ಇ.ಬಿ ಸರ್ಕಲ್ ಗಿಂತ ಮುಂಚಿತವಾಗಿ ಒಂದು ರಸ್ತೆ ತಿರುವು ಇದ್ದು ಅಲ್ಲಿ ಈ ಕಿಂಗ್ಸ್ ಕಾಫಿ ಕೋ ತಲೆ ಎತ್ತಿದ್ದು ಸಾಕಷ್ಟು ಕಾರ್, ಬೈಕುಗಳು ಸಂಜೆ ಆದರೆ ಸಾಕು ದಟ್ಟಣೆಯಾಗಿ ಜನಸಾಮಾನ್ಯರಿಗೆ ತಿರಿಗಾಡಲು ತೊಂದರೆ ಉಂಟುಮಾಡುತ್ತಿರುವುದು ಕಂಡುಬಂದಿದ್ದು, ಮಹಾನಗರ ಪಾಲಿಕೆಯವರೇ ದೃಢಪಡಿಸಿದ್ದು ಯಾವುದೇ ರೀತಿಯ ಪರವಾನಿಗೆ ನೀಡಿಲ್ಲ ಎಂದು. ಆದರೂ ಅದು ಹೇಗೆ ವ್ಯಾಪಾರ ಮಾಡುತ್ತಿರುವರೋ ವಿಸ್ಮಯಕಾರಿ!

Letter issued by Mysore city corporation

ಕಿಂಗ್ಸ್ ಕಾಫಿ ಕೋ. ಎಂಬ ಕಾಫಿ ಶಾಪ್ ಗೆ ಮೈಸೂರು ಮಹಾನಗರ ಪಾಲಿಕೆಯವರು ಯಾವುದೇ ರೀತಿಯ ಪರವಾನಿಗೆ ನೀಡಿಲ್ಲ ಎಂಬ ಹಿಂಬರಹ ಪತ್ರ ಕನ್ನಡ ಟುಡೇ ನ್ಯೂಸ್ ಗೆ ದೊರೆತಿದ್ದು, ಈ ಕುರಿತು ಧ್ವನಿ ಎತ್ತಿ ದೂರು ಸಲ್ಲಿಸಿದ ವಾಯ್ಸ್ ಆಫ್ ಪೀಪಲ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ವಸಂತರಾವ್ ಚೌಹಾಣ್ ಅವರು ದೂರು ಸಲ್ಲಿಸಿದಾಗ ಪಾಲಿಕೆಯಿಂದ ಉತ್ತರ ಮಾತ್ರ ಪರವಾನಿಗೆ ನೀಡಿಲ್ಲ ಎಂಬದು ಖಚಿತವಾಗಿದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಕ್ರಮ ಜರುಗಿಸುವರೇ ಜನರ ಜೀವನದ ಜೊತೆ ರಸ್ತೆ ಮೇಲೆ ಅಪಘಾತವಾಗುವ ರಸ್ತೆ ತಿರುವುನಲ್ಲಿ ಈಗಲಾದರೂ ವಾಹನಗಳು ನಿಲ್ಲುವುದು ತಪ್ಪಿಸುವರೋ ಕಾದುನೋಡಬೇಕಿದೆ.

ಡಾ. ಶ್ರೀ ಶಾಮನೂರು ಶಿವಶಂಕರಪ್ಪನವರ ಆರೋಗ್ಯ ವಿಚಾರಿಸಿದ ಸಾಣೆಹಳ್ಳಿ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ಸಾಣೇಹಳ್ಳಿ ಶ್ರೀಗಳು

ಇತ್ತೀಚೆಗೆ ಬೆಂಗಳೂರಿನಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು Dr .ಶಾಮನೂರು ಶಿವಶಂಕರಪ್ಪ ಅವರನ್ನು ಸಾಣೆಹಳ್ಳಿ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಆಶೀರ್ವದಿಸಿದರು.

ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳವರು

ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಶ್ವಾಸಕೋಶಕ್ಕೆ ಸಂಬಂಧಿಸಿದ ಚಿಕಿತ್ಸೆ ಪಡೆಯುತ್ತಿರುವ ದಾವಣಗೆರೆ ಶಾಸಕರು ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾದ ಶರಣ ಡಾ. ಶ್ರೀ ಶಾಮನೂರು ಶಿವಶಂಕರಪ್ಪನವರ ಆರೋಗ್ಯ ವಿಚಾರಿಸಿ ಶೀಘ್ರ ಗುಣಮುಖರಾಗಲೆಂದು ಹರಸಿ ಹಾರೈಸಿ ಆಶೀರ್ವದಿಸಿದ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳವರು.

ಅಮರೇಶ್ವರ ದೇವಸ್ಥಾನದಲ್ಲಿ ದಾಸೋಹದ ಹೆಸರಿನಲ್ಲಿ ಅವ್ಯವಹಾರ ತನಿಖೆಗೆ ನಮ್ಮ ಕರ್ನಾಟಕ ಸೇನೆ ಆಗ್ರಹ

ಲಿಂಗಸುಗೂರು: ಲಿಂಗಸುಗೂರು ತಾಲ್ಲೂಕಿನಲ್ಲಿರುವ ಅಮರೇಶ್ವರ ದೇವಸ್ಥಾನಕ್ಕೆ ಬರುವ ಭಕ್ತರು ದಾಸೋಹಕ್ಕೆಂದು ನೀಡಿದ ಹಣವನ್ನು ವ್ಯಯಕ್ತಿಕ ಖಾತೆಗೆ ಜಮಾಮಾಡಿಕೊಂಡು ಅವ್ಯವಹಾರದಲ್ಲಿ ಭಾಗಿಯಾದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ನಮ್ಮ ಕರ್ನಾಟಕ ಸೇನೆ ಪದಾಧಿಕಾರಿಗಳು ಪಟ್ಟಣದಲ್ಲಿ ಪ್ರತಿಭಟಿಸಿ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.


ತಾಲೂಕಿನ ಪುರಾಣ ಪ್ರಸಿದ್ಧ ಪುಣ್ಯ ಕ್ಷೇತ್ರವಾದ ಅಮರೇಶ್ವರ ದೇವಸ್ಥಾನದಲ್ಲಿ 1997ರ ಕಾಯ್ದೆ ಮತ್ತು ಅಧಿನಿಯಮ 2002 ಕಲಂ 69 ಬಿ ಪ್ರಕಾರ ಈ ದೇವಸ್ಥಾನದ ವ್ಯಾಪ್ತಿಯಲ್ಲಿ ಬರದ ಹಾಗೂ ತಾಲೂಕಿನವರಲ್ಲದವರು ಅನಧಿಕೃತವಾಗಿ ದಾಸೋಹ ನಡೆಸುತ್ತಿದ್ದಾರೆ. ಆದರೆ ಭಕ್ತರು ದಾಸೋಹಕ್ಕೆಂದು ಕಾಣಿಕೆ ರೂಪದಲ್ಲಿ ನೀಡಿದ ಹಣವನ್ನು ತಮ್ಮ ತಮ್ಮ ವ್ಯಯಕ್ತಿಕ ಖಾತೆಗಳಿಗೆ ಜಮಾ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಭಕ್ತರು ನೀಡಿದ ಹಣದಲ್ಲಿ ಕೋಟ್ಯಾಂತರ ರೂಪಾಯಿಗಳ ಅವ್ಯವಹಾರವಾಗಿದ್ದು ಈ ಅವ್ಯವಹಾರದಲ್ಲಿ ಭಾಗಿಯಾದವರ ಮೇಲೆ ಧಾರ್ಮಿಕ ಧತ್ತಿ ಕಾಯ್ದೆಯಡಿಯಲ್ಲಿ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.


ಈ ವೇಳೆ ನಮ್ಮ ಕರ್ನಾಟಕ ಸೇನೆ ತಾಲೂಕಾಧ್ಯಕ್ಷ ಶಿವರಾಜ ನಾಯ್ಕ್, ಪ್ರಧಾನ ಕಾರ್ಯದರ್ಶಿ ನಿರುಪಾದಿ ಹಿರೇಮಠ, ಚಂದ್ರು ಹಿರೇಮಠ, ವೆಂಕಟೇಶ ಗುಡದನಾಳ, ಚಂದ್ರಕಾಂತ ಭೋವಿ, ದೇವೆಂದ್ರ ನಾಯಕ, ಶಿವರಾಜ ಅಲಬನೂರು, ಶಂಕರ ಚೌಹಾಣ್, ರುದ್ರಯ್ಯಸ್ವಾಮಿ, ರಮೇಶ ಭೋವಿ, ಮಹಾಂತಯ್ಯ ಸ್ವಾಮಿ,ರಾಜು ಪತ್ತಾರ, ಶಿವಲಿಂಗ ಪುರಿ, ಬಸವಲಿಂಗ ಯಲಗಲದಿನ್ನಿ, ರಾಘವೇಂದ್ರ ಖೈರವಾಡಗಿ, ವೆಂಕಟೇಶ ಗುತ್ತೇದಾರ, ಕೃಷ್ಣಾ ಭೋವಿ, ಲಕ್ಷ್ಮಣ ಭೋವಿ, ರಾಜು ನಾಯಕ, ವಿವೇಕಾನಂದ ನಾಯಕ ಸೇರಿದಂತೆ ಇನ್ನಿತರರು ಇದ್ದರು.


WhatsApp
Follow by Email