ಬ್ರೇಕಿಂಗ್ ನ್ಯೂಸ್ ಬೆಳಗಾವಿಗೂ ವ್ಯಾಪಿಸಿದ ಕೊರೋನಾ ! 03/04/202003/04/20201 min read admin ಬೆಳಗಾವಿಬೆಳಗಾವಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಕೊರೋನೊ ವೈರಸ್ ಸೋಂಕಿತ ವ್ಯಕ್ತಿಗಳ ವರದಿ ನೆಗೆಟಿವ್ ಎಂದು ಬರುತ್ತಿದ್ದು ಜನರು ಸ್ವಲ್ಪ ನಿರಾಳರಾಗಿದ್ದರು. ಆದರೆ ಮೂವರು ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಚಿವ ಶೆಟ್ಟರ ಮಾಹಿತಿ ನೀಡಿದ್ದಾರೆ.3 ಜನರ ವರದಿ ಪಾಸಿಟಿವ್ ಬಂದಿದ್ದು ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸುವ ಸಾಧ್ಯತೆ ಹೆಚ್ಚಿದೆ. ಮೂವರ ವರದಿ ಪಾಸಿಟಿವ್ ಬಂದಿರುವುದರಿoದ ಬೆಳಗಾವಿ ಜಿಲ್ಲೆಯ ಜನರಲ್ಲಿ ಆಂತಕ ಸೃಷ್ಟಿ ಮಾಡಿದೆ.ಬೆಳಗಾವಿಯಲ್ಲಿ ಕೊರೋನಾ ದೃಢ ಪಟ್ಟ ಜನರು ದೆಹಲಿಯ ಜಮಾತ್ಗೆ ಹೋಗಿ ಬಂದವರು. ಬೆಳಗಾವಿಯ ಮೂವರಿಗೆ ಕೊರೋನಾ ಇರುವ ಶಂಕೆ ಇದೆ. ಆದ್ದರಿಂದ ಅವರನ್ನು ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹೇಳಿದ್ದಾರೆ. Share