ಹಳ್ಳೂರ : ಹಸಿದವರಿಗೆ ಅನ್ನ ನೀಡುವ ದೇವತಾ ಮನುಷ್ಯ : ಬಂಡಿಗಣಿ ದಾನೇಶ್ವರ ಸ್ವಾಮೀಜಿ

ಹಳ್ಳೂರ : ಉತ್ತರ ಕರ್ನಾಟಕದಲ್ಲಿ ಅನ್ನದಾನೇಶ್ವರ ಎಂದು ಪ್ರಸಿದ್ದವಾಗಿರುವ ಶ್ರೀ ಬಸವ ಗೋಪಾಲ ನೀಲಮಾಣಿಕ್ಯ ಮಠ ಸುಕ್ಷೇತ್ರ ಬಂಡಿಗಣಿಯ ದಾಸೋಹ ರತ್ನ ಚಕ್ರವರ್ತಿ ದಾನೇಶ್ವರ ಸ್ವಾಮೀಜಿ ಅವರಿಂದ ಗ್ರಾಮದಲ್ಲಿ ಕೊರೊನಾ ವೈರಸ್ ಹರಡದಂತೆ ಜನರನ್ನು ರಕ್ಷಿಸುತ್ತಿರುವ ಎಲ್ಲ ಅಧಿಕಾರಿಗಳಿಗೆ ಇಂದು ಸ್ವಾಮೀಜಿ ತಮ್ಮ ಮಠದಿಂದ ಊಟದ ವ್ಯೆವಸ್ಥೆ ಮಾಡಿದ್ದರು.
ಸ್ಥಳೀಯ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಊಟದ ವ್ಯೆವಸ್ಥೆ ಮಾಡಿದ ಬಸವ ಗೋಪಾಲ ಮಠದ ಭಕ್ತರು ಎಲ್ಲ ಅಧಿಕಾರಿಗಳಿಗೆ ಊಟ ಬಡಿಸುವು ಮೂಲಕ ಆ ಬಸವ ಗೋಪಾಲನ ಕೃಪೆಗೆ ಪಾತ್ರರಾದರು.
ಜನರ ಹಸಿವಿನಿಂದ ಬಳಲಬಾರದು ಎಂದು ಬೇರೆ ಬೇರೆ ರಾಜ್ಯದಲ್ಲಿ ಅನ್ನದಾಸೋಹ ಮಾಡಿ ಅನ್ನದಾನೇಶ್ವರ ಎಂದು ಅಂಕಿತನಾಮ ಪಡೆದ ದಾನೇಶ್ವರ ಸ್ವಾಮೀಜಿಯವರಿಗೆ ಸಲಾಂ. ಇಡೀ ದೇಶದ ತುಂಬೆಲ್ಲ ಲಾಕ್ ಡೌನ ಇರುವಾಗ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಹಸಿವಿನ ಕೊರತೆ ಉಂಟಾಗಬಾರದೆoದು ಎಲ್ಲ ಕಡೆಗಳಲ್ಲಿ ಅಧಿಕಾರಿಗಳಿಗೆ ಊಟದ ವ್ಯೆವಸ್ಥೆ ಮಾಡುತ್ತಿರುವ ದಾನೇಶ್ವರ ಸ್ವಾಮೀಜಿ ಅವರಿಗೆ ಹಸಿದವರಿಗೆ ಅನ್ನ ನೀಡುವ ದೇವತಾ ಮನುಷ್ಯ ಎಂದರು ತಪ್ಪಾಗಲಾರದು.

ಇದೆ ಸಂದರ್ಭದಲ್ಲಿ ಮೂಡಲಗಿ ಪೋಲಿಸ್ ಠಾಣಾಧಿಕಾರಿ ಮಲ್ಲಿಕಾರ್ಜುನ ಸಿಂಧೂರ, ಪೋಲಿಸ್ ಠಾಣೆಯ ಸಿಂಬ್ಬದಿಗಳು, ಗ್ರಾಮದ ಪಂಚಾಯತ ಸಿಂಬ್ಬದಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪತ್ರಿಕಾ ವರದಿಗಾರರು, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

Share
WhatsApp
Follow by Email