ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿಯವರಿಗೆ ಕೋರೋನ ಪರಿಹಾರ ನಿಧಿಗೆ ಒಂದು ಲಕ್ಷ ರೂ ಚೆಕ್ ನೀಡಿದ ಯುವ ಮುಖಂಡ ರಾವಸಾಬ ಬಿರಾದಾರ ಪಾಟೀಲ

ಅಥಣಿ :ಕೊರೊನ ವೈರಸ್ ರಾಜ್ಯದ ಜನತೆಯನ್ನು ತೀವ್ರ ಸಂಕಷ್ಟಕ್ಕೀಡು ಮಾಡಿದೆ. ಇದರಿಂದಾಗಿ ದುಡಿಯುವ ವರ್ಗಕ್ಕೆ ಉದ್ಯೋಗಗಳಿಲ್ಲದೆ ಆಹಾರ,ನೀರು,ಔಷಧಿಗಳಿಗೆ ಪರದಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ಮೊದಲೇ ಪ್ರವಾಹದಿಂದ ನಲುಗಿದ್ದ ನಾಡಿನ ರೈತ,ಕೂಲಿ ಕಾರ್ಮಿಕರನ್ನೂ ಸಹ ಈ ವೈರಸ್ ಕಂಗೆಡುವಂತೆ ಮಾಡಿದೆ.ಕೊರೊನಾ ಮುಕ್ತ ಭಾರತ ನಿರ್ಮಾಣಕ್ಕೆ ಅನೇಕ ಜನ ದಾನಿಗಳು ತಮ್ಮ ಮುಕ್ತ ಹಸ್ತದಿಂದ ದಾನ ನೀಡುತ್ತಿದ್ದು ಈ ಸಂದರ್ಭದಲ್ಲಿ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ಯುವ ಮುಖಂಡ ರಾವಸಾಬ ಲ ಬಿರಾದಾರ ಪಾಟೀಲ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ  1 ಲಕ್ಷ ರೂ ಚೆಕ್ ಅನ್ನು    ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಇಂದು ಮುಂಜಾನೆ ಹಸ್ತಾಂತರಿಸಿದರು
ಅಥಣಿಯ ಉಪ ಮುಖ್ಯಮಂತ್ರಿಗಳ ನಿವಾಸದಲ್ಲಿ ಚೆಕ್ಕನ್ನು  ನೀಡಿ ಮಾತನಾಡಿದ ರಾವಸಾಬ ಬಿರಾದಾರ ಪಾಟೀಲ ಜಗತ್ತಿಗೆ ಜಗತ್ತೆ ಬೆಚ್ಚಿ ಬೀಳುವಂತಹ ಪರಿಸ್ಥಿತಿಯಲ್ಲಿ ನಾವಿದ್ದೇವೆ ಅದಕ್ಕಾಗಿ ಪ್ರತಿಯೊಬ್ಬ ಸ್ಥಿತಿವಂತರು ತಮ್ಮ ಶಕ್ತಾನುಸಾರ ಸರಕಾರಕ್ಕೆ ಸಹಾಯವನ್ನು ನೀಡಿ  ಸಹಕರಿಸಬೇಕು
ಈ ಸಂದರ್ಭದಲ್ಲಿ ಕೇಂದ್ರ-ರಾಜ್ಯ  ಸನ್ನಿವೇಶವನ್ನು ಸಮರ್ಪಕವಾಗಿ ನಿಭಾಯಿಸಬೇಕಾದರೆ ಕೇವಲ ಸರ್ಕಾರಗಳಿಂದ ಮಾತ್ರ ಪರಿಹಾರ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ನಾವೆಲ್ಲರೂ  ಸರಕಾರದ ಜೊತೆ ನಿಂತು ಸಾರ್ವಜನಿಕರು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಚೆಕ್ ನೀಡಿದ ರಾವಸಾಬ ಲ ಬಿರಾದಾರ ಪಾಟೀಲ ಹಾಗೂ ಗ್ರಾಮದ ಗಣ್ಯರಾದ ಸುರೇಶ ವಾಡೆದ, ಅಶೋಕ ಗುಮಚಿ ಇನ್ನೂ ಅನೇಕರು ಉಪಸ್ಥಿತರಿದ್ದರು.
Share
WhatsApp
Follow by Email