ಬ್ರೇಕಿಂಗ್ ನ್ಯೂಸ್ ಮೂಡಲಗಿ ಪುರಸಭೆ ಮತ್ತು ತಹಸಿಲ್ದಾರ್ ಕಾರ್ಯಾಲಯದಲ್ಲಿ ಹಂದಿಗಳಂತೆ ದರ್ಬಾರ್… ! 09/04/202009/04/2020 admin ಮೂಡಲಗಿ ಪುರಸಭೆ ಮತ್ತು ತಹಸೀಲ್ದಾರ್ ಕಾರ್ಯಾಲಯದಲ್ಲಿ ಹಂದಿಗಳದೆ ದರ್ಬಾರ್…!ಮೂಡಲಗಿ : ಕೊರೊನಾ ವ್ಯೆರಸ್ ಹಡರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕೇಂದ್ರ ಸರಕಾರ ಹಾಗೂ ರಾಜ್ಯ ಸರ್ಕಾರ ತಗೆದುಕೊಂಡ ಕ್ರಮಗಳಿಗೆ ನಗರದ ಪ್ರದೇಶ, ಗ್ರಾಮೀಣ ಪ್ರದೇಶದ ಜನರಿಗೆ ಮೂಡಲಗಿಯ ತಾಲೂಕಾ ತಹಶೀಲ್ದಾರ ಹಾಗೂ ಪುರಸಭೆ ಅಧಿಕಾರಿಗಳು ಜನರಿಗೆ ಮನವರಿಕೆ ಜಾಗೃತಿ ಮೂಡಿಸಬೇಕಾದ ಅಧಿಕಾರಿಗಳೇ ತಮ್ಮ ಸರಕಾರಿ ಕಚೇರಿಗಳ ಮುಂದೆ ಪ್ರತಿನಿತ್ಯ ಹಂದಿಗಳ ಹಾವಳಿ ಇದ್ದರೂ ಕೂಡ ಅಧಿಕಾರಿಗಳು ಮಾತ್ರ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದೇ ಹಂದಿಗಳನ್ನು ನೋಡುತ್ತಾ ಕೆಲಸ ಮಾಡುತ್ತಿದ್ದಾರೆ.ಅಧಿಕಾರಿಗಳು ಒಳಗಡೆ ಕುಳಿತ್ತರು ಆಫೀಸ್ ಮುಂಭಾಗದಲ್ಲಿ ಏನು ನಡಿಯುತ್ತಿದೆ ಎಂದು ಗೊತ್ತೆ ಇರೋಲ್ಲ.ಆಫೀಸ್ ಬಾಗಿಲು ಮುಂಭಾಗದಲ್ಲಿ ಹಂದಿಗಳದೆ ಹಾವಳಿ ಹೆಚ್ಚಾಗಿದೆ.ಕಾರ್ಯಾಲಯದ ಮುಂಭಾಗದಲ್ಲಿ ನಾವೆ ರಾಜಾ ಇಲ್ಲಿ ನಮ್ಮನು ತಡೆಯುವರು ಯಾರು ಇಲ್ಲ ಎಂದು ಹಂದಿಗಳು ತಮ್ಮ ರಾಜ್ಯಭಾರ ನಡೆಸುತ್ತಿದ್ದಾವೆ.ಇನ್ನೂ ಸ್ವಲ್ಪ ದಿನ ಬಿಟ್ಟರೆ ಇದು ಹಂದಿಗಳು ವಾಸ ಮಾಡುವ ಸ್ಥಳ ವಾಗುವದರಲ್ಲಿ ತಪ್ಪಿಲ್ಲ ಅನಿಸುತ್ತೆ.ಇದಕ್ಕೆ ಅಧಿಕಾರಿಗಳ ಬೇಜವಾಬ್ದಾರಿತನ ಕಾರಣ ಎಂದು ಸಾರ್ವಜನಿಕರ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಹಂದಿಗಳ ಬಗ್ಗೆ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಪ್ರಜ್ಞಾವಂತರ ಮಾತಾಗಿದೆ. Share