ಬ್ರೇಕಿಂಗ್ ನ್ಯೂಸ್ ಗುರ್ಲಾಪೂರದಲ್ಲಿ ಕೆ.ಎಮ್.ಎಫ್ ರಾಜ್ಯಾಧ್ಯಕ್ಷ ಶಾಸಕ ಬಾಲಚಂದ್ರ ಜಾರಕಿಹೊಳಿಯವರಿಂದ ಕೊಡಲ್ಪಟ್ಟ ಆಹಾರ ಧಾನ್ಯ ಕಿಟ್ಟ್ ವಿತರಣೆ 25/04/202025/04/2020 admin ವರದಿ: ಕೆ.ವಾಯ್ ಮೀಶಿಮೂಡಲಗಿ: ಕೋರೋನಾ ಎಂಬ ಮಹಾ ಮಾರಿ ರೋಗವು ಜಗತ್ತಿನಾಧ್ಯಾಂತ ಅಟ್ಟಹಾಸ ಮೇರಿಯುತ್ತಿದೆ ಇದರಿಂದ ಲಾಕಡೌನ ಎಂಬ ನಿಯಮದಿಂದ ಬಡವರು ಕೂಲಿರ್ಕಾಮಿಕರು ಕಂಗಾಲಾಗಿದ್ದಾರೆ ಇದನ್ನು ಮನಗೊಂಡು ಅರಭಾಂವಿ ಕ್ಷೇತ್ರದ ಜನರಿಗೆ ಸಹಾಯವಾಗಲಿಎಂದು ಕ್ಷೇತ್ರದ ಶಾಸಕರಾದ ಬಾಲಚಂದ್ರ ಜಾರಕಿಹೋಳಿ ರವರು ಆಹಾರ ಧಾನ್ಯದ ಕಿಟ್ಟನ್ನು ಪ್ರತಿಯೊಂದು ಮನೆಗೂ ಆಶಾಕಾರ್ಯಕರ್ತೆಯರ ಮೂಲಕ ವಿತರಣೆ ಮಾಡಿದರು. ಗುರ್ಲಾಪೂರದಲ್ಲಿಯೂ ಸಹ ಲಾಕಡೌನದ ಎಲ್ಲ ನೀಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿರಿ ಸುರಷಿತವಾಗಿ ಮನೆಯಲ್ಲಿ ಇರಿ. ಸಮಾಜಿಕ ಅಂತರವನ್ನು ಕಾಪಾಡಿರಿ ಎಂಬ ಸಂದೇಶದೂಂದಿಗೆ ಪ್ರತಿಯೊಂದು ಮನೆ ಮನೆಗೆ ಆಹಾರಧಾನ್ಯದ ಕಿಟ್ಟ್ ನ್ನು ವಿತರಿಸಿದರು.ಈ ಸಂದರ್ಭದಲ್ಲಿ ಮೂಡಲಗಿ ಪುರಸಭೆ ಸದಸ್ಯರಾದ ಆನಂದ ಟಪಾಲದಾರ, ಯಲ್ಲವ್ವಾ ಗಡ್ಡೆಕಾರ, ಗಂಗವ್ವಾ ಮುಗಳಖೋಡ, ಸಿದ್ದು ಗಡ್ಡೆಕಾರ, ಪ್ರಕಾಶ ಮುಗಳಖೋಡ, ಆಶಾ ಕಾರ್ಯಕರ್ತೆಯರಾದ ವೀನಾ ಮರಾಠೆ, ಸರು ಹಿರೇಮಠ, ಶೋಬಾ ಇಟ್ನಾಳ , ಈರವ್ವಾ ಚೌಲಗಿ, ಶಿವಲಿಂಗವ್ವಾ ಸುಳ್ಳನ್ನವರ, ಪಾರ್ವತಿ ಮಗದುಮ್ಮ ಅಂಗನವಾಡಿ ಕಾರ್ಯಕರ್ತೆಯರು, ಎನ್ ಎಸ್ ಎಫ್ ಸಿಬಂದಿ ಶಿಕ್ಷಣ ಇಲಾಖೆ ಹಾಗು ಪೂಲೀಸ ಇಲಾಖೆ ಪುರಸಭೆ ಹಾಗೂ ತಾಲೂಕಾ ದಂಡಾದಿಕಾರಿಯವರು, ಸಿಬ್ಬಂದಿಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ಸಮಾಜೀಕ ಅಂತರವನ್ನುಕಾಯದುಕೂಳ್ಳಲಾಗಿತ್ತು. Share