ಕೆಎಸ್‌ಎಂಸಿ ಕರ್ನಾಟಕದಲ್ಲಿ ವಿವಿಧ ವ್ಯವಸ್ಥಾಪಕ ಹುದ್ದೆಗಳ ನೇಮಕ: ವೇತನ ಶ್ರೇಣಿ ರೂ.52,650 ರಿಂದ 97,100 ವರೆಗೆ

ಕೆಎಸ್‌ಎಂಸಿ ಕರ್ನಾಟಕದಲ್ಲಿ ವಿವಿಧ ವ್ಯವಸ್ಥಾಪಕ ಹುದ್ದೆಗಳ ನೇಮಕ: ವೇತನ ಶ್ರೇಣಿ ರೂ.52,650 ರಿಂದ 97,100 ವರೆಗೆ

ಕೆಎಸ್‌ಎಂಸಿಎಲ್‌ ಕರ್ನಾಟಕದಲ್ಲಿ ಗಣಿಗಾರಿಕೆಯ ಒಂದು ಪ್ರಧಾನ ಸಂಸ್ಥೆಯಾಗಿದ್ದು, ಪ್ರಸ್ತುತ ಉತ್ಪಾದನೆ, ಎಂಐಎಸ್, ಲೇಬರ್ ವೆಲ್‌ಫೇರ್‌, ಮಾರ್ಕೆಟಿಂಗ್, ಮೆಕ್ಯಾನಿಕಲ್ ವಿಭಾಗದ ವ್ಯವಸ್ಥಾಪಕರ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಪ್ರಕಟಿಸಿದೆ.

ಕರ್ನಾಟಕ ಸ್ಟೇಟ್‌ ಮಿನರಲ್ಸ್‌ ಕಾರ್ಪೋರೇಷನ್‌ ಲಿಮಿಟೆಡ್ (ಕೆಎಸ್‌ಎಂಸಿಎಲ್‌) ಕಂಪನಿಯು ಕರ್ನಾಟಕದಲ್ಲಿ ಗಣಿಗಾರಿಕೆಯ ಒಂದು ಪ್ರಧಾನ ಸಂಸ್ಥೆಯಾಗಿದ್ದು, ತನ್ನ ಗಣಿಗಾರಿಕಾ ಕಾರ್ಯ ಚಟುವಟಿಕೆಗಳನ್ನು ವಿಸ್ತರಿಸುವ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಹೊಂದಿರುತ್ತದೆ. ಪ್ರಸ್ತುತ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ.

ಕಂಪನಿಯು ಗ್ರೂಪ್‌-ಎ ವೇತನ ಶ್ರೇಣಿ ರೂ.52,650-97,100 ಜತೆಗೆ ರಾಜ್ಯ ಸರ್ಕಾರದ ತುಟ್ಟಿ ಭತ್ಯೆ, ಇತರೆ ಅರ್ಹ ಸವಲತ್ತುಗಳನ್ನು ಹುದ್ದೆಗಳಿಗೆ ನೀಡಲಿದೆ.ವಿವಿಧ ಕ್ಷೇತ್ರದ ಈ ಕೆಳಗಿನ ವ್ಯವಸ್ಥಾಪಕರ ಹುದ್ದೆಗಳನ್ನು ನೇರ ನೇಮಕಾತಿಯ ಮೂಲಕ ಭರ್ತಿ ಮಾಡಲು ಅಗತ್ಯ ವಿದ್ಯಾರ್ಹತೆ ಮತ್ತು ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಪದನಾಮ ಹಾಗೂ ಹುದ್ದೆಗಳ ವಿವರ

ವ್ಯವಸ್ಥಾಪಕ (ಉತ್ಪಾದನೆ) : 3

ವ್ಯವಸ್ಥಾಪಕ (ಎಂಐಎಸ್) : 1

ವ್ಯವಸ್ಥಾಪಕ ( ಲೇಬರ್ ವೆಲ್‌ಫೇರ್) : 1

ವ್ಯವಸ್ಥಾಪಕ (ಮಾರ್ಕೆಟಿಂಗ್) : 1

ವ್ಯವಸ್ಥಾಪಕ ( ಮೆಕ್ಯಾನಿಕಲ್) :1

ಒಟ್ಟು ಹುದ್ದೆಗಳು: 07

ಅರ್ಜಿ ಸಲ್ಲಿಕೆ ಹೇಗೆ?

ಮೇಲಿನ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ನಮೂನೆಗಳನ್ನು ಕೆಎಸ್‌ಎಂಸಿಎಲ್‌ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬೇಕು. ನಂತರ ಭರ್ತಿ ಮಾಡಿದ ಅರ್ಜಿಗಳನ್ನು ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.

ಹುದ್ದೆಗಳ ಮೀಸಲಾತಿ ವರ್ಗೀಕರಣ, ಶೈಕ್ಷಣಿಕ ವಿದ್ಯಾರ್ಹತೆ, ಶಾಸನಬದ್ಧ ಸರ್ಟಿಫಿಕೇಟ್, ಅನುಭವ, ವಯಸ್ಸು, ಆಯ್ಕೆ ವಿಧಾನ, ಅರ್ಜಿ ಶುಲ್ಕ, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಹಾಗೂ ಇತರೆ ಷರತ್ತು ಮತ್ತು ನಿಬಂಧನೆಗಳಿಗಾಗಿ ಸಂಸ್ಥೆಯ ವೆಬ್‌ಸೈಟ್‌ www.ksmc.karnataka.gov.in ಗೆ ಭೇಟಿ ನೀಡಲು ಸೂಚಿಸಲಾಗಿದೆ

ಸದರಿ ನೇಮಕಾತಿ ಪ್ರಕಟಣೆ ಪ್ರಸ್ತುತ ಪತ್ರಿಕಾ ಪ್ರಕಟಣೆಯಾಗಿ ಬಿಡುಗಡೆ ಮಾಡಲಾಗಿದ್ದು, ಶೀಘ್ರದಲ್ಲಿ ಈ ಹುದ್ದೆಗಳ ನೇಮಕಾತಿ ಕುರಿತು ನೋಟಿಫಿಕೇಶನ್‌ ಅನ್ನು ವೆಬ್‌ಸೈಟ್‌ www.ksmc.karnataka.gov.in ನಲ್ಲಿ ಅಪ್‌ಲೋಡ್‌ ಮಾಡಲಾಗುತ್ತದೆ.

Share

Leave a Reply

Your email address will not be published.

WhatsApp
Follow by Email