ಶ್ರೀಶೈಲ : ಶ್ರೀಶೈಲ ಕ್ಷೇತ್ರಕ್ಕೆ ಸಮಾನವಾದ ಕ್ಷೇತ್ರ ಇನ್ನೊಂದಿಲ್ಲ. ಹಿಂದೂ ಧರ್ಮಭೂಮಿಯ ನಾಬಿಯ ಸ್ಥಳವಿದು ಹಾಗೂ ದೇಹದ ಮಧ್ಯ ಭಾಗವಿದ್ದಂತೆ. ಪುಣ್ಯ ಕ್ಷೇತ್ರಕ್ಕೆ ಪ್ರಾಚಿನ ಕಾಲದಿಂದಲು ಮಲ್ಲಿಕಾರ್ಜುನ ಹಾಗೂ ಬ್ರಹ್ಮರಾಂಬಾ ದೇವಿಯ ದರ್ಶನಕ್ಕೆ ಬರುವುದು ಆಚರಣೆಯಲ್ಲಿ ಸಾಗಿ ಬಂದಿದೆ ಎಂದು ಶ್ರೀಶೈಲ ಪೀಠದ ಜಗದ್ಗುರುಗಳಾದ ಡಾ, ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಹೇಳಿದರು.
ಅವರು ಶ್ರೀಶೈಲದ ಅಡಕೇಶ್ವರದಲ್ಲಿ ಬಂಡಿಗಣಿಯ ದಾನೇಶ್ವರ ಶ್ರೀಗಳ 8 ದಿನಗಳ ಕಾಲ ನಿರಂತರ ದಾಸೋಹ ನಡೆದ ಸ್ಥಳಕ್ಕೆ ಭೇಟಿ ನೀಡಿ ಭಕ್ತರು ಮತ್ತು ದಾಸೋಹವನ್ನು ಉದ್ದೇಶಿಸಿ ಮಾತನಾಡುತ್ತಾ ವರ್ಷದಿಂದ ವರ್ಷಕ್ಕೆ ಶ್ರೀಶೈಲಕ್ಕೆ ಭಕ್ತರು ಹೆಚ್ಚಾಗುತ್ತಿದ್ದಾರೆ, ಭಕ್ತಿಯಿಂದ ಬಂದವರಿಗೆ ದೇವರು ಒಲುಮೆಯಾಗುವದು ಆದರೆ ಈ ವರ್ಷ ಕರೋನಾ ವೈರಸ್ ಬಯಾನಕ ರೋಗದಿಂದ ಭಕ್ತರಿಗೆ ಅಸ್ತವ್ಯಸ್ಥವಾಗಿದೆ. ಆದರೆ ಆರೋಗ್ಯದ ದೃಷ್ಠಿಯಿಂದ ಸರಕಾರದ ಆದೇಶವನ್ನು ಪಾಲಿಸುವುದು ಅನಿವಾರ್ಯವಾಗಿದೆ. “ಕರೋಣ” ರೋಗವು ಎಲ್ಲರೂ ಮುನ್ನೆಚ್ಚರಿಕೆ ಕ್ರಮವನ್ನು ಅನುಸರಿಸಿಕೊಳ್ಳಬೇಕು. ಪ್ರತಿ ವರ್ಷ ದಾಸೋಹ ರಾಜೋಪಚಾರ ಇಷ್ಟಾರ್ಥ ಭೋಜನ ಮಾಡಿಸಿ ದಿನಾಲು ಲಕ್ಷಾಂತರ ಭಕ್ತರಿಗೆ ದಾಸೋಹ ನಡೆಸುವ ದಾನೇಶ್ವರ ಶ್ರೀಗಳ ಕಾರ್ಯದ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದರು ಹಾಗೂ ಈ ದಾಸೋಹ ಸೇವೆ ಉತ್ತರೋತ್ತರವಾಗಿ ಬೆಳೆದು ಜಗತ್ತಿನ ತುಂಬ ಶ್ರೀಗಳ ಕೀರ್ತಿ ಹಬ್ಬಲಿ ಎಂದು ಹಾರೈಸಿ “ದಾಸೋಹ ಸಾಮ್ರಾಟ್” ಅನ್ನುವುದರಲ್ಲಿ ಸಂಶಯವಿಲ್ಲ, ಮಲ್ಲಿಕಾರ್ಜುನೆ ದಾನೇಶ್ವರ ಶ್ರೀಗಳಲ್ಲಿ ಅಡಗಿ ವರ್ಷದ 365 ದಿನಗಳಲ್ಲಿ ದಾಸೋಹದಲ್ಲಿ ನಡೆಸುತ್ತಿದಾರೆ.ಇಂತಹ ಬೃಹತ್ ಪ್ರಮಾಣ ದಾಸೋಹ ಇದು ಒಂದು ಪವಾಡವೇ ಸರಿ.. ದಾಸೋಹಗಳಲ್ಲಿ ಮುಖ್ಯವಾಗಿ ಶ್ರೀಶೈಲ ಪಂಡರಪೂರ, ತುಳಜಾಪೂರ, ಯಲ್ಲಮ್ಮನಗುಡ್ಡ ಹಾಗೂ ಯಡೂರ ಸೇರಿದಂತೆ ವರ್ಷದಲ್ಲಿ 282 ಪುಣ್ಯ ಕ್ಷೇತ್ರಗಳಲ್ಲಿ ದಾಸೋಹ ನಡೆಸುವದು , ದಾಸೋಹ ಸೇವೆಯಲ್ಲಿ ಬಾಗಿಯಾಗಿರುವ ಸದ್ಭಕ್ತರೆಲ್ಲರಿಗೂ ಮಲ್ಲಿಕಾರ್ಜುನ ದೇವರ ಆಶಿರ್ವಾದ ಇರಲಿ ಎಂದು ಹಾರೈಸಿದರು, ದಾಸೋಹ ಸ್ಥಳಕ್ಕೆ ಪಿ.ಆರ್.ಒ ಮತ್ತು ಸಿ.ಎಸ್.ಒ ಅಧಿಕಾರಗಳಾದ ಟಿ.ಶ್ರೀನಿವಾಸ ರಾವ್. ಬಿ.ತಿರುಮಲಯ ಬೇಟಿ ನೀಡಿ ಹರುಷ ವ್ಯಕ್ತಪಡಿಸಿದರು
ಇದೆ ಸಂದರ್ಭದಲ್ಲಿ ಅಂಬಿಕಾ ನಗರ ಶ್ರೀಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ಬಂಡಿಗಣಿಯ ದಾನೇಶ್ವರ ಶ್ರೀಗಳು ,ಮಲ್ಲಿಕಾರ್ಜುನ ದೇವಸ್ಥಾನದ ಆಡಳಿತ ಮಂಡಳಿಯವರು, ಪೊಲೀಸ ಅಧಿಕಾರಿಗಳು , ಸುಮಂಗಲಾ ತಾಯಿ ಪಾಟೀಲ, ರಾಮಣ್ಣಾ ಮೇಟಿ, ವೀಣಾ ಹೂಗಾರ(ವಕೀಲರು), ಚಿಕ್ಕು ಬಂಗಿ, ಸಂಗಪ್ಪಾ ಹಂದಿಗುoದ, ಗಂಗಪ್ಪ ರಾಜಾಪೂರ, ಶ್ರೀಶೈಲ ಕಾಂತಿ, ಚನ್ನಮಲ್ಲಪ್ಪ ಕಂಪು, ಅಲ್ಲಪ್ಪ ಗಣೇಶವಾಡಿ, ಶಿವು ಹಿರೇಮಠ ಸೇರಿದಂತೆ ಸಹಸ್ರಾರು ಭಕ್ತರು ಪಾದಯಾತ್ರಿಕರು ಉಪಸ್ಥಿತರಿದ್ದರು