ಬ್ರೇಕಿಂಗ್ ನ್ಯೂಸ್ ಘಟಪ್ರಭಾ: ಕೊರೋನಾ ಜನ ಜಾಗೃತಿ ಹಾಗೂ ಕರ ಪತ್ರ ಹಂಚಿಕೆ 23/03/202023/03/20201 min read admin ಘಟಪ್ರಭಾ : ಜಗತ್ತಿನಾದ್ಯಾಂತ ಮಹಾ ಮಾರಿಯಾಗಿ ಕಾಡುತ್ತಿರುವ ಕೊರೋನಾ ರೋಗ ನಿಯಂತ್ರಣ ನಮ್ಮೆಲ್ಲ ಜವಾಬ್ದಾರಿ, ಮನುಕುಲದ ಉಳಿವಿಗಾಗಿ ಸರ್ಕಾರದ ಆದೇಶದ ಮೇರೆಗೆ ಮಾರ್ಚ 31ರ ವರೆಗೂ ಅನಗತ್ಯವಾಗಿ ಯಾರು ಮನೆಯಿಂದ ಹೊರಗಡೆ ಬರಬಾರದು. ಈ ಕಾಯಿಲೆ ಸಾಂಕ್ರಾಮಿಕ ರೋಗವಾಗಿದ್ದೂ ಯಾರು ಭಯಪಡುವ ಅವಶ್ಯಕತೆಯಿಲ್ಲ. ಆದರೇ ಮುನ್ನೇಚ್ಚಿಕೆ ಅತ್ಯಂತ ಅವಶ್ಯಕ ಎಂದು ರಾಜಾಪೂರ ಗ್ರಾಮ ಪಂಚಾಯತಿ ಅಭಿವೃಧ್ದಿ ಅಧಿಕಾರಿ ಉದಯಕುಮಾರ ಬೆಳ್ಳುಂಡಗಿ ಜನರಿಗೆ ಕರೆ ನೀಡಿದರು. ಗ್ರಾಮದಲ್ಲಿ ಇಂದು ಹಮ್ಮಿಕೊಂಡಿದ್ದ ಜನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಇವರು ಯುಗಾದಿ ಹಬ್ಬದ ನಿಮಿತ್ಯವಾಗಿ ಪ್ರತಿವರ್ಷ ನಡೆಯುತ್ತಿದ್ದ ಶ್ರೀ ಚೂನಮ್ಮಾದೇವಿಯ ದೀಡ್ ನಮಸ್ಕಾರ, ಪಲ್ಲಕ್ಕಿ ಸೇವೆ ಹಾಗೂ ಇನ್ನಿತರೇ ಎಲ್ಲ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ. ಅದರೊಂದಿಗೆ ಕಂದಾಯ ಇಲಾಖೆಯ ಎಲ್ಲ ಕೆಲಸಗಳನ್ನು ಮಾರ್ಚ 31ರ ವರೆಗೆ ಗ್ರಾಮದಲ್ಲಿ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ರಾಜಾಪೂರ ಗ್ರಾಮ ಸಂಪೂರ್ಣ ಲಾಕ್-ಡೌನ್ ಆಗುತ್ತದೆ ಆದ ಕಾರಣ ದಯಮಾಡಿ ಎಲ್ಲ ಸಾರ್ವಜನಿಕರು ಸಕರಿಸಬೇಕೆಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಗ್ರಾಮದ ತುಂಬೆಲ್ಲ ಕೋರೋನಾ ರೋಗವನ್ನು ಹೇಗೆ ತಡೆಗಟ್ಟಬೇಕು? ಬರದಂತೆ ಮುಂಜಾಗೃತೆಯನ್ನು ಹೇಗೆ ತೆಗೆದುಕೊಳ್ಳಬೇಕು? ಎಂಬುದರ ಕುರಿತು ಕಾರ್ಯದರ್ಶಿ ನಾಗೇಶ ಹಾಸಲ್ಕರ್, ಗ್ರಾಮ ಪಂಚಾಯತಿ ಚುನಾಯಿತ ಸದಸ್ಯರು, ತಾಲೂಕಾ ಪಂಚಾಯತಿ ಸದಸ್ಯರು, ಜಿಲ್ಲಾ ಪಂಚಾಯತಿ ಸದಸ್ಯರು ಸೇರಿದಂತೆ ಗ್ರಾಮದ ಹಿರಿಯರು, ಆಶಾ ಕಾರ್ಯಕರ್ತೆಯರೂ, ಅಂಗನವಾಡಿ ಕಾರ್ಯಕರ್ತೆಯರೂ, ಯುವಕರು ಸೇರಿ ದ್ವನಿ ವರ್ಧಕ ಬಳಕೆ ಮಾಡಿ ಹೆಮ್ಮಾರಿ ಕೊರೋನಾ ನಿಯಂತ್ರಣಕ್ಕೆ ಮುಂದಾಗಿದ್ದಾರೆ. ಇದರೊಂದಿಗೆ ಪ್ರತಿವಾರ ನಡೆಯುವ ಬುಧವಾರದ ಸಂತೆಯನ್ನು (ಬಜಾರ್) ಬಂದ್ ಮಾಡಲಾಗಿದೆ. ಅತೀ ತುರ್ತು ಸೇವೆಗಳಾದ ಆಸ್ಪತ್ರೆ, ಮೆಡಿಕಲ್ ಶಾಪ್, ದಿನಸಿ ಅಂಗಡಿ, ಹಾಲಿನ ಡೇರಿ ಹೊರತುಪಡಿಸಿ ಗ್ರಾಮದ ಇನ್ನೂಳಿದ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ ಎಂದು ಸಾರ್ವಜನಿಕ ಪ್ರಕಟೆಣೆಯಲ್ಲಿ ರಾಜಾಪೂರ ಗ್ರಾಮ ಪಂಚಾಯತಿ ಅಭಿವೃಧಿ ಅಧಿಕಾರಿ ತಿಳಿಸಿದ್ದಾರೆ. Share