ಕರೋನಾ ವಾರಿರ‍್ಸ್ಗೆ ಸಿಹಿ ಊಟ: ಅಭಿನಂದನಾ ಪತ್ರ ವಿತರಿಸಿದ ಸಹಕಾರಿ ದುರೀಣ ಮಲ್ಲಿಕಾರ್ಜುನ ತೇಲಿ

ಕರೋನಾ ವಾರಿರ‍್ಸ್ಗೆ ಸಿಹಿ ಊಟ: ಅಭಿನಂದನಾ ಪತ್ರ ವಿತರಿಸಿದ ಸಹಕಾರಿ ದುರೀಣ ಮಲ್ಲಿಕಾರ್ಜುನ ತೇಲಿ

ಮುಗಳಖೋಡ: ಕೋವಿಡ್-19 ಮಹಾಮಾರಿ ಕರೋನಾ ವಿರುದ್ಧದ ಹೋರಾಟದಲ್ಲಿ ತಮ್ಮ ಕುಟುಂಬ, ಜೀವದ ಹಂಗು ತೊರೆದು ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಕರೋನಾ ವಾರಿರ‍್ಸ್ ಕಾರ್ಯ ಶ್ಲಾಘನೀಯ. ಹಂದಿಗುoದದಲ್ಲಿ ಪ್ರಪ್ರಥಮವಾಗಿ ಸಹಾಯವಾಣಿ ಪ್ರಾರಂಭಿಸಿ ಗುರು ಹಿರಿಯರ, ವಿವಿಧ ಮುಖಂಡರ, ದಾನಿಗಳ ಸಹಾಯದಿಂದ ಪ್ರತಿನಿತ್ಯ ಕಡು ಬಡವ, ದೀನ ದಲಿತರ ಮನೆ ಮನೆಗೆ ತರಕಾರಿ ಹಾಲು, ಹಣ್ಣು ಹಾಗೂ ಔಷಧಿಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ. ಸಮುದಾಯದ ಸಹಕಾರ ಅತ್ಯಗತ್ಯ ಎಂದು ಹಂದಿಗುoದದ ಸಹಕಾರಿ ದುರೀಣ ಮಲ್ಲಿಕಾರ್ಜುನ ತೇಲಿ ಹೇಳಿದರು.
ಅವರು ಹಂದಿಗುoದ ಸಮುದಾಯ ಭವನದಲ್ಲಿ ಕರೋನಾ ವೈರಸ್ ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಗ್ರಾಮ ಪಂಚಾಯತ್, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಪೋಲಿಸ್, ಆರೋಗ್ಯ ಇಲಾಖೆ, ಪಶು ಇಲಾಖೆ ಸಿಬ್ಬಂದಿಗಳಿಗೆ ಹಾಗೂ ಪತ್ರಕರ್ತರಿಗೆ ಕೃತಜ್ಞತಾ ಪತ್ರವನ್ನು 80ಕ್ಕೂ ಹೆಚ್ಚು ಕರೋನಾ ವಾರಿರ‍್ಸ್ಗೆ ವಿತರಿಸಿ ಮಾತನಾಡಿದರು.
ಮಲ್ಲಿಕಾರ್ಜುನ ಬನಪ್ಪ ತೇಲಿಯವರು ಇಬ್ಬರು ವಿಶೇಷ ಚೇತನರಿಗೆ ಅವರು ಕುಳಿತ ಸ್ಥಳಕ್ಕೆ ಹೋಗಿ ಕೃತಜ್ಞತಾ ಪತ್ರವನ್ನು ನೀಡಿ ಅಭಿನಂದಿಸಿ, ಮಾನವೀಯತೆ ಮೆರೆದರು. ಭಾರತಾಂಬೆಯ ಭಾವಚಿತ್ರಕ್ಕೆ ಪೂಜೆ, ಪುಷ್ಪವೃಷ್ಟಿ ಮಾಡಿದರು. ಯುವಮುಖಂಡ ಶಂಕರಗೌಡ ಪಾಟೀಲ್, ಎ ಎಸ್ ಐ ದುಂದಮನಿ, ಅಭಿವೃದ್ದಿ ಅಧಿಕಾರಿ ಶ್ರೀಮತಿ ಸವಿತಾ ಚಿನಗುಂಡಿ ಮಾತನಾಡಿದರು. ಆಶಾ ಕಾರ್ಯಕರ್ತೆ ಗೀತಾ ಡೋನೂರ್, ಆರ್ ಎಸ್ ಎಸ್ ತಾಲೂಕಾ ಸಂಚಾಲಕ ಶ್ರೀನಿವಾಸ ಚಿಕ್ಕಟ್ಟಿ, ಸತೀಶ್ ಬಂದಿ ಕರ್ತವ್ಯ ನಿರ್ವಹಿಸುವಾಗ ತಮ್ಮ ಅನುಭವ ಅನಿಸಿಕೆಗಳನ್ನು ಹಂಚಿಕೊAಡರು. ಎಲ್ಲ ಕರೋನಾ ವಾರಿರ‍್ಸ್ಗೆ ಸಿಹಿಯೂಟದ ವ್ಯವಸ್ಥೆಯನ್ನು ಸಹಕಾರಿ ದುರೀಣ ಮಲ್ಲಿಕಾರ್ಜುನ ತೇಲಿ ಮಾಡಿದ್ದರು.
ಗ್ರಾ.ಪಂ ಮಾಜಿ ಉಪಾಧ್ಯಕ್ಷ ಗೌಡಪ್ಪ ಪಾಟೀಲ್, ದಿನೇಶ್ ಬಂದಿ, ಪೋಲಿಸ್ ಇಲಾಖೆಯ ಆರ್.ಆರ್. ವಾಘ್ಮೋರೆ, ಉಪಾಧ್ಯಕ್ಷ ಶಿವಪ್ಪ ಹೊಸುರ್, ಗ್ರಾ.ಪಂ ಸದಸ್ಯ ಸಂಗಪ್ಪ ಮಿರ್ಜಿ, ಮಲ್ಲೇಶ್ ಕೌಜಲಗಿ, ರಾಕೇಶ್ ಚಿಲ್ಲಾಳಶೆಟ್ಟಿ, ಶಿದ್ರಾಯ ಉಳ್ಳಾಗಡ್ಡಿ, ಸೌರಭ ಚೌಗಲಾ, ಶೇಖರಗೌಡ ಪಾಟೀಲ್, ರವಿ ಘಂಟಿ, ಸಿದ್ದು ಚೌಗಲಾ, ಪ್ರಕಾಶ್ ಬಂದಿ, ಪ್ರಭು ಚಿನಗುಂಡಿ, ರಮೇಶ್ ಪಾಟೀಲ್, ಗುರುರಾಜ್ ಬಂದಿ ಇದ್ದರು. ಸತೀಶ್ ಬಂದಿ ಸ್ವಾಗತಿಸಿ ನಿರೂಪಿಸಿದರು
Share
WhatsApp
Follow by Email