ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್–9ರ ಎರಡನೇ ವಾರದ ಎಲಿಮಿನೇಶನ್‌ಗೆ ಕ್ಷಣಗಣನೆ ಶುರುವಾಗಿದೆ. ಈ ವಾರ 9 ಮಂದಿ ನಾಮಿನೇಟ್ ಆಗಿದ್ದು, ಹೊರಹೋಗುವ ಸ್ಪರ್ಧಿ ಯಾರು ಎಂಬ ಕುತೂಹಲ ಮನೆ ಮಾಡಿದೆ.
ಪ್ರಶಾಂತ್ ಸಂಬರಗಿ, ನೇಹಾ ಗೌಡ, ದರ್ಶ್ ಚಂದ್ರಪ್ಪ, ನವಾಜ್, ಆರ್ಯವರ್ಧನ್ ಗುರೂಜಿ, ರೂಪೇಶ್ ರಾಜಣ್ಣ, ಮಯೂರಿ, ಅಮೂಲ್ಯ ಗೌಡ, ದೀಪಿಕಾ ದಾಸ್ ನಾಮಿನೇಟ್ ಆಗಿದ್ದಾರೆ. ಕಳೆದ ವಾರ ಮನೆಯಿಂದ ಹೊರಹೋದ ಐಶ್ವರ್ಯಾ ಪಿಸೆ, ಬಿಗ್ ಬಾಸ್ ಅವರು ನೀಡಿದ್ದ ವಿಶೇಷ ಅಧಿಕಾರವನ್ನು ಬಳಸಿಕೊಂಡು ಆರ್ಯವರ್ಧನ್ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದರು.
ಇದನ್ನೂ ಓದಿ : ಟಿಪ್ಪು ಎಕ್ಸ್‌ಪ್ರೆಸ್ ಇನ್ನು ಮುಂದೆ ‘ಒಡೆಯರ್’ ಎಕ್ಸ್‌ಪ್ರೆಸ್ !
ಇನ್ನು, ಈ ವಾರದ ಕ್ಯಾಪ್ಟನ್ ವಿನೋದ್ ಗೊಬ್ಬರಗಾಲ ಅವರು, ಬಿಗ್ ಬಾಸ್ ಸೂಚನೆಯಂತೆ ತಮ್ಮ ಅಧಿಕಾರ ಬಳಸಿಕೊಂಡು ರೂಪೇಶ್ ರಾಜಣ್ಣ ಅವರನ್ನು ನಾಮಿನೇಟ್ ಮಾಡಿದ್ದರು. ಉಳಿದ ಏಳು ಮಂದಿ ಮನೆಯ ಸದಸ್ಯರ ಅಭಿಪ್ರಾಯದ ಆಧಾರದ ಮೇಲೆ ಎಲಿಮಿನೇಶನ್ ಹಂತಕ್ಕೆ ಬಂದು ನಿಂತಿದ್ದಾರೆ.ಮನೆಯ ಸದಸ್ಯರ ಜೊತೆ ಅಷ್ಟಾಗಿ ಬೆರೆಯುತ್ತಿಲ್ಲ ಎಂಬ ಕಾರಣಕ್ಕೆ ದರ್ಶ್ ಚಂದ್ರಪ್ಪ ಅವರಿಗೆ ಅತಿ ಹೆಚ್ಚು ಜನ ನಾಮಿನೇಶನ್‌ಗೆ ಮತ ಹಾಕಿದ್ದರು
ರಾಕೇಶ್‌ಗೆ ಕಳಪೆ ಪಟ್ಟ: ಹೌದು, ಮನೆಯಲ್ಲಿ ಆಗಾಗ್ಗೆ ಪ್ರ್ಯಾಂಕ್ ಮಾಡುತ್ತಾ ಕೆಲವರ ಕೆಂಗಣ್ಣಿಗೆ ಗುರಿಯಾಗಿರುವ ರಾಕೇಶ್ ಅಡಿಗ ಅವರಿಗೆ ಈ ವಾರದ ಕಳಪೆ ಪಟ್ಟ ಸಿಕ್ಕಿದೆ. ವಿನೋದ್ ಗೊಬ್ಬರಗಾಲ ಮತ್ತು ರಾಕೇಶ್‌ಗೆ ಸಮಾನ ಮತಗಳು ಬಿದ್ದಿದ್ದವು. ಬಳಿಕ, ಆರ್ಯವರ್ಧನ್ ಅವರು ರಾಕೇಶ್ ಕಡೆ ಬೊಟ್ಟು ಮಾಡಿದ್ದರಿಂದ ಟೈ ಬ್ರೇಕರ್ ಮೂಲಕ ಅವರು ಜೈಲು ಸೇರಿದರು.